ADVERTISEMENT

ಏಕತೆ ದುರ್ಬಲಗೊಳಿಸುವವರ ವಿರೋಧಿಸಿ: ಪ್ರತಾಪ್ ಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 13:52 IST
Last Updated 3 ಫೆಬ್ರುವರಿ 2023, 13:52 IST
ಮೈಸೂರಿನಲ್ಲಿ ಶುಕ್ರವಾರ ನಡೆದ ಭಾವ್ಯಕ ಶಿಬಿರದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಕೋಶದ ರಾಜ್ಯ ಎಸ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಮಾತನಾಡಿದರು
ಮೈಸೂರಿನಲ್ಲಿ ಶುಕ್ರವಾರ ನಡೆದ ಭಾವ್ಯಕ ಶಿಬಿರದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಕೋಶದ ರಾಜ್ಯ ಎಸ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಮಾತನಾಡಿದರು   

ಮೈಸೂರು: ‘ರಾಷ್ಟ್ರೀಯ ಏಕತೆ ಹಾಗೂ ಏಕೀಕರಣವನ್ನು ದುರ್ಬಲಗೊಳಿಸುವ ಶಕ್ತಿ ಮತ್ತು ಆಲೋಚನೆಗಳನ್ನು ವಿರೋಧಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಕೋಶದ ರಾಜ್ಯ ಎಸ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯ, ಕ್ರೀಡಾ ಇಲಾಖೆ ಹಾಗೂ ಎನ್ಎಸ್‌ಎಸ್‌ ಯೋಜನೆಯ ಸಹಯೋಗದಲ್ಲಿ ನಗರದ ಎನ್‌ಎಸ್‌ಎಸ್‌ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಅವರು ಮಾತನಾಡಿದರು.

‘ದೇಶವು ಹಲವು ವೈವಿಧ್ಯಗಳಿಂದ ಕೂಡಿದೆ. ಅಂತೆಯೇ ವೈವಿಧ್ಯತೆಯಲ್ಲಿ ಏಕತೆಯನ್ನೂ ಹೊಂದಿದೆ. ಜನರು ವಿಭಿನ್ನ ರೀತಿಯ ಆಹಾರವನ್ನು ಸೇವಿಸುತ್ತಾರೆ. ಬಗೆ ಬಗೆಯ ಉಡುಪುಗಳು ಧರಿಸುತ್ತಾರೆ. ನಾವು ವಿವಿಧ ಧರ್ಮಗಳಿಗೆ ಸೇರಿದವರಾಗಿದ್ದರೂ ಮತ್ತು ವಿವಿಧ ಭಾಷೆಗಳನ್ನು ವಾತನಾಡುತ್ತಿದ್ದರೂ ನಾವೆಲ್ಲರೂ ಒಂದೇ. ಈ ಮನೋಭಾವ ಎಲ್ಲರಲ್ಲೂ ಸದಾ ಜಾಗೃತವಾಗಿರಬೇಕು’ ಎಂದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ್ ಮಾತನಾಡಿದರು.

ಎನ್ಎಸ್ಎಸ್‌ ಕಾರ್ಯಕ್ರಮ ಸಂಯೋಜಕ ಪ್ರೊ.ಚಂದ್ರಶೇಖರ್, ಪ್ರೊ.ಕಾಳಚನ್ನೇಗೌಡ, ಕನ್ನಡ ಪ್ರಾಧ್ಯಾಪಕ ಪ್ರೊ.ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.