ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಅಳುತ್ತಿರುವ ನವಜಾತಶಿಶುವೊಂದನ್ನು ಎತ್ತಿಕೊಂಡು ನರ್ಸ್ವೊಬ್ಬರು ಮೊಬೈಲ್ ಆ್ಯಪ್ನಲ್ಲಿನ ಹಾಡೊಂದಕ್ಕೆ ಅಭಿನಯಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿತ್ತು.
ಟಿಕ್ಟಾಕ್ ಮಾದರಿಯ ಆ್ಯಪ್ನಲ್ಲಿ ಕೇಳಿ ಬರುವ ಎರಡು ಹಾಡುಗಳಿಗೆ ಮಗುವನ್ನು ಎತ್ತಿಕೊಂಡ ನರ್ಸ್ ಅಭಿನಯಿಸಿದ್ದಾರೆ. ಈ ವೇಳೆ ಮಗು ಅಳುತ್ತಿರುತ್ತದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಲುವಾಂಬ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಂದ್ರಕುಮಾರ್, ‘ಈ ವಿಡಿಯೊ ತುಂಬಾ ಹಳೆಯದು. ಈ ಕುರಿತು ಈಗಾಗಲೇ ತನಿಖೆ ನಡೆಸಲಾಗಿದೆ. ನರ್ಸ್ ಮಗುವನ್ನು ಎತ್ತಿಕೊಂಡಾಗ ಬೇರೆಯವರು ಆಕೆಯ ವಿಡಿಯೊ ತೆಗೆದು ವಿವಿಧ ತಂತ್ರಾಂಶಗಳಲ್ಲಿ ಹಾಕಿ ತಿರುಚಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.