ಮೈಸೂರು: ಕಲುಷಿತ ನೀರು ಸೇವಿಸಿ ಮೃತಪಟ್ಟ ಕೆ.ಸಾಲುಂಡಿ ಗ್ರಾಮದ ನಿವಾಸಿ ಕನಕರಾಜು ಮನೆಗೆ ಬೋಗಾದಿ ಪಟ್ಟಣ ಪಂಚಾಯಿತಿ ಸದಸ್ಯರು ಸೋಮವಾರ ಭೇಟಿ ನೀಡಿ, ಆಶ್ರಯ ಯೋಜನೆಯಡಿ ಮನೆ ಕಟ್ಟಿಸಿಕೊಡುವ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದರು.
ಕನಕರಾಜು ಮೃತಪಟ್ಟ ಬಳಿಕ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ₹5 ಲಕ್ಷ ಪರಿಹಾರ ಘೋಷಿಸಿ, ಕೊಡಿಸಿದ್ದರು. ಅದರೊಂದಿಗೆ ಆಶ್ರಯ ಯೋಜನೆಯಡಿ ಮನೆ ಕೊಡಿಸುತ್ತೇವೆ ಹಾಗೂ ಕನಕರಾಜು ಸಹೋದರನಿಗೆ ಉದ್ಯೋಗ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಘಟನೆ ನಡೆದು ವರ್ಷ ಕಳೆದರೂ ಭರವಸೆ ಈಡೇರಿರಲಿಲ್ಲ.
ಕನಕರಾಜು ತಾಯಿ ಹಾಗೂ ಸಹೋದರ ವಾಸವಿದ್ದ ಮನೆಯ ಒಂದು ಭಾಗ ಕುಸಿದುಬಿದ್ದಿತ್ತು. ಸೋಮವಾರ ಜಿಲ್ಲಾಧಿಕಾರಿ ಸೂಚನೆಯಂತೆ ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜು, ಆರೋಗ್ಯ ನಿರೀಕ್ಷಕ ಪುನೀತ್, ವಸತಿ ವಿಭಾಗದ ಅಧಿಕಾರಿ ಕಾಮರಾಜ್, ಕೆ.ಸಾಲುಂಡಿ ಪಂಚಾಯಿತಿ ಸದಸ್ಯ ಬೋಜರಾಜ್ ಕನಕರಾಜ್ ಕುಟುಂಬವನ್ನು ಭೇಟಿಯಾಗಿ ಮಾಹಿತಿ ಪಡೆದರು. ಈ ಬಗ್ಗೆ ‘ಪ್ರಜಾವಾಣಿ’ಯು ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.