ADVERTISEMENT

ಮೈಸೂರು: ಪರಿವರ್ತನಾ ಬಿಸಿನೆಸ್ ಸ್ಕೂಲ್‌ ಪದವಿ ಪ್ರದಾನ

‘ಉದ್ಯೋಗ ವಲಯದಲ್ಲಿ ಕೌಶಲಕ್ಕೆ ಬೇಡಿಕೆ’

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 5:38 IST
Last Updated 24 ಆಗಸ್ಟ್ 2025, 5:38 IST
ಮೈಸೂರಿನಲ್ಲಿ ಪರಿವರ್ತನ ಬಿಸಿನೆಸ್ ಸ್ಕೂಲ್ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮವನ್ನು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಪರಿವರ್ತನ ಬಿಸಿನೆಸ್ ಸ್ಕೂಲ್ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮವನ್ನು ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ   

ಮೈಸೂರು: ಶ್ರೀ ಅನಿಕೇತನ ಟ್ರಸ್ಟ್‌ನ ಅಂಗಸಂಸ್ಥೆಯಾದ ಪರಿವರ್ತನಾ ಬಿಸಿನೆಸ್ ಸ್ಕೂಲ್‌ನಿಂದ ಶನಿವಾರ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ 120 ಎಂಬಿಎ ಮತ್ತು 45 ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ‍ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಪಠ್ಯದ ಜೊತೆಗೆ ಪಠ್ಯೇತರವಾಗಿಯೂ ಗುರುತಿಸಿಕೊಂಡು ಜ್ಞಾನ ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪದವಿ ಪಡೆದರೆ ಉದ್ಯೋಗ ಎಂಬ ಮಾತು ಕಡಿಮೆಯಾಗಿದೆ. ಅದರೊಂದಿಗೆ ಕೌಶಲವೂ ಅಗತ್ಯ ಎಂಬ ಬೇಡಿಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಪ್ರಸ್ತುತ ಸಮಾಜದ ತುಡಿತವನ್ನು ಅರ್ಥೈಸಿಕೊಳ್ಳಬೇಕು’ ಎಂದರು.

‘ಕೇವಲ ಸಂಪಾದನೆಯೊಂದೇ ಜೀವನದ ದಾರಿಯಾಗಬಾರದು. ಸಮಾಜ ಸೇವೆಯ ಮೂಲಕ ಉತ್ತಮ ಜಗತ್ತನ್ನು ನಿರ್ಮಿಸಬಹುದು. ಯಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಭಾವನೆಗಳಿಂದ ದೂರವಾಗುತ್ತಿದ್ದು, ಶಿಕ್ಷಣವು ಈ ವಿಚಾರಗಳನ್ನು ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಂಸ್ಥೆಯ ಎನ್.ಎಸ್. ರಾಮೇಗೌಡ, ಪುಟ್ಟೇಗೌಡ, ಬಿ. ವಿ. ಕುಮಾರ್, ಕೆ.ಬಿ. ಧನಂಜಯ, ಪಿ. ಮಂಜೂರಾಮ್, ಪ್ರೊ. ಎನ್. ರಾಮು, ಜಿ. ರಘುನಂದನ, ಎಂ.ಎಂ. ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.