ADVERTISEMENT

‘ಭಾರತ ಯಾತ್ರಿ’ಗಳೊಂದಿಗೆ ಮೈಸೂರಿನ ಪ್ಯಾರಿ ಜಾನ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:24 IST
Last Updated 2 ಅಕ್ಟೋಬರ್ 2022, 6:24 IST

ಮೈಸೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಪಾದಯಾತ್ರೆಯಲ್ಲಿ ‘ಭಾರತ ಯಾತ್ರಿ’ಗಳ (ಯಾತ್ರೆಯುದ್ದಕ್ಕೂ ಭಾಗವಹಿಸುವವರು) ಪೈಕಿ ಮೈಸೂರು ಜಿಲ್ಲೆಯವರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ಯಾರಿ ಜಾನ್ ಒಬ್ಬರು.

ಕೇರಳದಿಂದ ಆರಂಭವಾದ ಪಾದಯಾತ್ರೆಯಲ್ಲಿ ಸಹಯಾತ್ರಿಗಳೊಂದಿಗೆ ಅವರು ಹುಮ್ಮಸ್ಸಿನಿಂದ ಹೆಜ್ಜೆ ಹಾಕುತ್ತಿದ್ದಾರೆ.

‘ಪಕ್ಷದ ನಾಯಕ ಹಮ್ಮಿಕೊಂಡಿರುವ ದೇಶದಾದ್ಯಂತ ನಡೆಯುವ ಯಾತ್ರೆಗೆ ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರಲ್ಲಿ ನಾನೊಬ್ಬಳಾಗಿರುವುದಕ್ಕೆ ಹೆಮ್ಮೆಯಾಗುತ್ತದೆ. ಬೆಳಿಗ್ಗೆ 6.30ರಿಂದಲೇ ನಡಿಗೆ ಆರಂಭವಾಗುತ್ತದೆ. ಯಾರು ಬರಲಿ, ಬಾರದಿರಲಿ ರಾಹುಲ್‌ ಗಾಂಧಿ ಯಾತ್ರೆ ಆರಂಭಿಸುತ್ತಾರೆ. ವಾಸ್ತವ್ಯ ಮೊದಲಾದವುಗಳಿಗೆ ಕಂಟೇನರ್‌ಗಳನ್ನು ಬಳಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಯಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ಆ ಭಾಗದ ಸಂಸ್ಕೃತಿಯ ಪರಿಚಯ ಆಗುತ್ತಿದೆ. ‍ಪಕ್ಷ ಸಂಘಟನೆಗೂ ಸಹಕಾರಿಯಾಗುತ್ತಿದೆ. ಅಲ್ಲಿನ ನಾಯಕರ ಬಗ್ಗೆಯೂ ತಿಳಿಯುತ್ತದೆ. ಯಾತ್ರೆಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿರುವುದು ನಮ್ಮ ಹುಮ್ಮಸ್ಸು ಹೆಚ್ಚಿಸಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.