ADVERTISEMENT

ಲಸಿಕೆ ಕೊರತೆ: ಎರಡನೇ ಡೋಸ್ ಲಸಿಕೆಗೆ ನೂಕುನುಗ್ಗಲು

ಅಂತರ ಮರೆತು ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 3:25 IST
Last Updated 13 ಜುಲೈ 2021, 3:25 IST
ಬೆಟ್ಟದಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಲಸಿಕೆ ಪಡೆಯಲು ಸಾರ್ವಜನಿಕರು ಮುಗಿಬಿದ್ದರುವ ದೃಶ್ಯ
ಬೆಟ್ಟದಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಲಸಿಕೆ ಪಡೆಯಲು ಸಾರ್ವಜನಿಕರು ಮುಗಿಬಿದ್ದರುವ ದೃಶ್ಯ   

ಬೆಟ್ಟದಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಎರಡನೇ ಡೋಸ್ ಲಸಿಕೆ ಪಡೆಯಲು ವೃದ್ಧರು, ಮಹಿಳೆಯರು ಯಾವುದೇ ಅಂತರ ಕಾಪಾಡಿಕೊಳ್ಳದೆ ಲಸಿಕೆ ಪಡೆಯಲು ಮುಗಿಬಿದ್ದಿದ್ದರು.

ಕೊರೊನಾ ನಿಯಂತ್ರಣಕ್ಕಾಗಿ ಲಸಿಕೆ ಪಡೆಯಲು ನಾ ಮುಂದು ತಾ ಮುಂದು ಎಂಬಂತೆ ಜನರು ಒಬ್ಬರಿಗೊಬ್ಬರು ಅಂಟಿಕೊಂಡೇ ನಿಂತಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಪ್ಪತ್ತು ಲಸಿಕೆಗಳು ಮಾತ್ರ ಲಭ್ಯವಿದ್ದು, ನೂರಕ್ಕೂ ಹೆಚ್ಚು ಜನರು ಮುಂದಾಗಿದ್ದರು.

ಹೆಸರು ಹೇಳದ ಮಹಿಳೆ ಮೊದಲ ಲಸಿಕೆ ಪಡೆದು ಮೂರು ತಿಂಗಳು ಕಳೆದಿವೆ ಈಗ ಲಸಿಕೆ ಪಡೆಯಲು ಬಂದರೆ ಆಗ ಬನ್ನಿ ಈಗ ಬನ್ನಿ ಎಂದು ಸಬೂಬು ನೀಡುತ್ತಾರೆ. ನಾವು ಪ್ರತಿದಿನ ಕೂಲಿ ಕೆಲಸ ಬಿಟ್ಟು ಇಲ್ಲಿಯೇ ಬಂದು ನಿಂತರೆ ನಮ್ಮ ಹೊಟ್ಟೆ ಪಾಡು ನೋಡುವವರಾರು ಎಂದು ಆಸ್ಪತ್ರೆಯ ಸಿಬ್ಬಂದಿಗೆ ಶಾಪ ಹಾಕುತ್ತಾ ಹೊರನಡೆದರು.

ADVERTISEMENT

ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಸಾಕಷ್ಟು ಬಾರಿ ಮನವಿ ಮಾಡಿದರೂ ಪೊಲೀಸರ ಜೊತೆ ಜನ ವಾಗ್ವಾದಕ್ಕೆ ಮುಂದಾದರು. ನಿಗದಿತ ಸಮಯದಲ್ಲಿ ಎರಡನೇ ಡೋಸ್ ಲಸಿಕೆಯನ್ನು ನೀಡಲು ತಾಲ್ಲೂಕು ಆಡಳಿತ ಸಕಲ ವ್ಯವಸ್ಥೆ ಮಾಡಿಕೊಳ್ಳುವಂತೆ ಗ್ರಾಮಸ್ಥರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.