
ಪಿರಿಯಾಪಟ್ಟಣ: ‘ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಿ ₹ 12 ಕೋಟಿ ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ’ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಹಳೆಪೇಟೆ ಕಂಠಾಪುರ, ಭಾನು ಕೋಟಿ ಬಡಾವಣೆ, ಗಾಂಧಿನಗರ, ಅಬ್ಬೂರು, ತೋಪಿನಕೋಳ ಬೀದಿ, ಕೆಎಚ್‌ಬಿ ಬಡಾವಣೆ ಸೇರಿದಂತೆ ವಿವಿಧ ಭಾಗದಲ್ಲಿ ₹12 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
‘ನನ್ನ ಅಧಿಕಾರಾವಧಿಯಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತರಲು ಶ್ರಮಿಸಿದ್ದೇನೆ. ಈ ನಿಟ್ಟಿನಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆ, ಒಳಚರಂಡಿ ವ್ಯವಸ್ಥೆ, ವಿವಿಧ ಸರ್ಕಾರಿ ಕಚೇರಿಗಳ ಕಟ್ಟಡ ನಿರ್ಮಾಣ, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಸಾರ್ವಜನಿಕರಿಗೆ ಉಪಯೋಗವಾಗುವ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ’ ಎಂದರು.
ಶಿರವಿ ಸಮಾಜದವರಿಗೆ ಪ್ರತ್ಯೇಕ ಸ್ಮಶಾನದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಪ್ರತಿಯೊಂದು ಜಾತಿಗೂ ಪ್ರತ್ಯೇಕವಾಗಿ ಸ್ಮಶಾನ ನೀಡಲು ಅವಕಾಶವಿಲ್ಲ. ಸಾರ್ವಜನಿಕ ಸ್ಮಶಾನಕ್ಕೆ ಸ್ಥಳ ಗುರುತಿಸಿ’ ಎಂದು ತಹಶೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಸೂಚಿಸಿದರು.
ಪುರಸಭೆ ಮಾಜಿ ಸದಸ್ಯರಾದ ರವಿ, ಮಂಜುನಾಥ್, ಶ್ಯಾಮ್, ರತ್ನಮ್ಮ, ತಮ್ಮಣ್ಣಯ್ಯ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸುರೇಶ್, ಮುಖಂಡರಾದ ನಂದೀಶ್, ಅಭಿ ಕಿರಂಗೂರು, ಅಶೋಕ್ ಕುಮಾರ್ ಗೌಡ, ರಾಜೇಶ್, ಬಸವರಾಜ್, ಡಿ.ಟಿ.ಸ್ವಾಮಿ, ವಿಷಕಂಠಯ್ಯ, ತಾ.ಪಂ. ಇಒ ಸುನೀಲ್ ಕುಮಾರ್, ಎಇಇ ವೆಂಕಟೇಶ್, ಎಇ ಕುಮಾರ್, ಜೆಇ ದಿನೇಶ್, ಎಇಇ ಕೃಷ್ಣ ಮೂರ್ತಿ, ಡಾ.ಸೋಮಯ್ಯ, ಬಿಇಒ ರವಿ ಪ್ರಸನ್ನ, ಸಿಡಿಪಿಒ ವೀಣಾ, ಆರ್‌ಎಫ್‌ಒ ಪದ್ಮಶ್ರೀ, ಮುಖಂಡರಾದ ಬಿ.ಜೆ. ಬಸವರಾಜ್, ಅಶೋಕ್ ಕುಮಾರ್ ಗೌಡ, ಪಿ.ಪಿ.ಮಹದೇವ್, ಮುಕೇಶ್, ರಾಜೇಶ್, ಅಬ್ದುಲ್ ಅಜೀಜ್, ಪಿ.ಮಹದೇವ್, ಸಂತೋಷ್, ತ್ರಿನೇಶ್, ಮಂಜುನಾಥ್, ಮಹದೇವ್, ಚಂದ್ರು ಮಾಸ್ಟರ್, ಸಂಪತ್, ಧನರಾಜ್, ಚಿಕ್ಕ ಮಹದೇವ್, ಚಂದ್ರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.