ADVERTISEMENT

‘ಸಂಘಟನೆಗಳಿಗೆ ಸಾಮಾಜಿಕ ಜವಾಬ್ದಾರಿ ಇರಲಿ’

ಡಾ. ಬಾಬು ಜಗಜೀವನರಾಂ ಸಾಮಾಜಿಕ ಹೋರಾಟ ಸಮಿತಿ ಸಂಘದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 3:22 IST
Last Updated 14 ಸೆಪ್ಟೆಂಬರ್ 2025, 3:22 IST
ಪಿರಿಯಾಪಟ್ಟಣದಲ್ಲಿ ಶನಿವಾರ  ಡಾ. ಬಾಬು ಜಗಜೀವನರಾಂ ಸಾಮಾಜಿಕ ಹೋರಾಟ ಸಮಿತಿ ಸಂಘದ ಉದ್ಘಾಟನೆ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆರ್.ಎಸ್. ದೊಡ್ಡಣ್ಣ, ಎಂ.ಎನ್. ಆದಿಶೇಷ, ಶ್ರೀನಿವಾಸ ಮೂರ್ತಿ  ಭಾಗವಹಿಸಿದ್ದರು
ಪಿರಿಯಾಪಟ್ಟಣದಲ್ಲಿ ಶನಿವಾರ  ಡಾ. ಬಾಬು ಜಗಜೀವನರಾಂ ಸಾಮಾಜಿಕ ಹೋರಾಟ ಸಮಿತಿ ಸಂಘದ ಉದ್ಘಾಟನೆ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆರ್.ಎಸ್. ದೊಡ್ಡಣ್ಣ, ಎಂ.ಎನ್. ಆದಿಶೇಷ, ಶ್ರೀನಿವಾಸ ಮೂರ್ತಿ  ಭಾಗವಹಿಸಿದ್ದರು   

ಪಿರಿಯಾಪಟ್ಟಣ: ‘ಜನಪರ ಸಂಘಟನೆಗಳು ಸಾಮಾಜಿಕ ಜವಾಬ್ದಾರಿಯೊಂದಿಗೆ ಗೌರವ ತರುವ ಕಾರ್ಯಕ್ರಮಗಳನ್ನು ಮಾಡಬೇಕು’ ಎಂದು ಸಾಮಾಜಿಕ ಹೋರಾಟಗಾರ ಆರ್.ಎಸ್. ದೊಡ್ಡಣ್ಣ ತಿಳಿಸಿದರು.

 ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಬಾಬು ಜಗಜೀವನರಾಂ ಸಾಮಾಜಿಕ ಹೋರಾಟ ಸಮಿತಿಯ ನೂತನ ಸಂಘದ ಉದ್ಘಾಟನೆ ಮತ್ತು  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ಇಬ್ಬರೂ ಮಹನೀಯರು ದಲಿತ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಇವರ ಆದರ್ಶ ತತ್ವಗಳು ನಮಗೆ ದಾರಿದೀಪವಾಗಿದ್ದು, ನಾವು ಪಾಲನೆ ಮಾಡಬೇಕು. ಮಾದಿಗ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಪರಂಪರೆಯಿದ್ದು, ಶತಮಾನಗಳಿಂದ ಸಮುದಾಯದ ವಚನಕಾರರು, ಶಿವಶರಣರು ಇತಿಹಾಸ ಪುರುಷರಾಗಿದ್ದಾರೆ ಎಂದರು. 

ADVERTISEMENT

ಡಾ.ಬಾಬು ಜಗಜೀವನರಾಂ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಶ್ರೀನಿವಾಸ್ ಮೂರ್ತಿ ಮಾತನಾಡಿ, ಯುವ ಪೀಳಿಗೆ ವಿದ್ಯಾವಂತರಾಗುವುದರ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಸಂಘದ ಅಧ್ಯಕ್ಷ ಎಂ. ಎನ್. ಆದಿಶೇಷ, ಗೌರವಾಧ್ಯಕ್ಷರ ಬಿ.ಜೆ. ಸುರೇಶ್, ಉಪಾಧ್ಯಕ್ಷ ಹರೀಶ್ ಪಿ, ಖಜಾಂಚಿ ಉದಯ್ ಬಿ.ಕೆ, ಕಾರ್ಯದರ್ಶಿಗಳಾದ ಗಿರೀಶ್.ಬಿ.ಕೆ., ನಟೇಶ್ ಇ., ನಾಗೆಂದ್ರ,.ಕುಮಾರ್, ಸಾಗರ್ ಎಂ.ಕೆ., ಚಂದ್ರ, ವೆಂಕಟೇಶ, ಸಂಚಾಲಕರಾದ ಸ್ವಾಮಿ, ಶ್ರೀನಿವಾಸ, ಸಲಹೆಗಾರರಾದ ಕಾಳಯ್ಯ ಎಂ.ಕೆ, ರವಿ ಬಿ.ಕೆ.,ಸದಸ್ಯರಾಗಿ ರವಿ, ಸುರೇಶ, ಪ್ರವೀಣ್, ಸೋಮಣ್ಣ, ಮಹದೇವ್ ಇದ್ದರು.

 ಪ್ರತಿಭಾವಂತ ವಿದ್ಯಾರ್ಥಿಗಳು, ಸಮುದಾಯದ ಚುನಾಯಿತ ಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಿದರು. ಸಾಮಾಜಿಕ ನ್ಯಾಯಪರ ವೇದಿಕೆ ಅಧ್ಯಕ್ಷ  ರವಿಕುಮಾರ್ ಮರಡೀಪುರ, ಮುಖಂಡರಾದ ಕೃಷ್ಣ ಮೂರ್ತಿ ಬ್ಯಾಲಾಳು, ಮಲ್ಲೇಶ್, ಶ್ರೀನಿವಾಸ್, ಅಕ್ಕಯ್ಯಮ್ಮ, ಲಕ್ಷ್ಮಮ್ಮ, ರಾಜು, ಮಹೇಶ್, ಹುಣಸೂರು ವೆಂಕಟೇಶ್, ಮಲ್ಲೇಶ್, ರಮೇಶ್, ಲೇಖಕಿ ಅಶ್ವಿನಿ, ಜ್ಯೋತಿ, ವೀಣಾ, ಲೋಕೇಶ್, ರಾಮು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.