ADVERTISEMENT

ಪಿರಿಯಾಪಟ್ಟಣ| ಮರ್ಯಾದೆಗೇಡು ಹತ್ಯೆಗೀಡಾದ ಯುವತಿ ಬರೆದಿದ್ದ ಪತ್ರ ವೈರಲ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 2:47 IST
Last Updated 10 ಜೂನ್ 2022, 2:47 IST
ಯುವತಿ ಪೊಲೀಸರಿಗೆ ಬರೆದಿರುವ ಪತ್ರ
ಯುವತಿ ಪೊಲೀಸರಿಗೆ ಬರೆದಿರುವ ಪತ್ರ    

ಪಿರಿಯಾಪಟ್ಟಣ: ತಾಲ್ಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಹತ್ಯೆಯಾದ ಯುವತಿ ತನ್ನ ತಂದೆ ತಾಯಿ ಕಿರುಕುಳ ಕೊಡುತ್ತಿರುವುದಾಗಿ ಪೊಲೀಸರಿಗೆ ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ಯುವತಿಯು, ‘ನನ್ನ ತಾಯಿಯು ನನ್ನನ್ನು ಮಗಳು ಎಂಬುದನ್ನು ಮರೆತು ಅಸಹ್ಯವಾಗಿ ಹೊಲಸು ಪದಗಳಿಂದ ನಿಂದಿಸಿ ಜೀವನವೇ ಬೇಡ ಅನಿಸುವ ಹಾಗೆ ಮಾಡಿರುತ್ತಾರೆ. ಪಕ್ಕದ ಮನೆಯವರ ಮಾತು ಕೇಳಿ ನನ್ನ ತಂದೆಯು ನನಗೆ ನಿರಂತರ ಚಿತ್ರಹಿಂಸೆ ನೀಡುತ್ತಿದ್ದಾರೆ. ನಾನು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು ಕಾನೂನಾತ್ಮಕವಾಗಿ ನಮಗೆ ಮದುವೆಯ ವಯಸ್ಸು ಬಂದಾಗ ಮದುವೆಯಾಗುವುದರ ಬಗ್ಗೆ ನಾವು ಮನೆಯಲ್ಲಿ ಪ್ರಸ್ತಾಪ ಮಾಡಿದ ದಿನದಿಂದ ಇಲ್ಲಿಯವರೆಗೆ ನನಗೆ ನಿರಂತರ ಕಿರುಕುಳ ಉಂಟಾಗಿದೆ’ ಎಂದಿದ್ದಾಳೆ.

ಪೋಷಕರಿಂದ ಬೇಸತ್ತು ಸಾಯುವ ನಿರ್ಧಾರ ಮಾಡಿರುವಾಗಲೇ ತಂದೆ ತಾಯಿ ಕೊಲೆ ಆಕೆಯ ಮಾಡಿದ್ದಾರೆ. ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ವಯಸ್ಸಿನ ಮಗಳ ಜೀವ ತೆಗೆದಿದ್ದಾರೆ. ದ್ವಿತೀಯ ಪಿಯು ವಿದ್ಯಾರ್ಥಿನಿ ಶಾಲಿನಿ (17) ಮಂಜುನಾಥ್ ನನ್ನು ಪ್ರೀತಿಸುತ್ತಿದ್ದಳು. ಸಾವಿನಲ್ಲಿಯೂ ಕೂಡ ತನ್ನ ಪ್ರಿಯಕರನನ್ನು ಬಿಟ್ಟುಕೊಡದೆ, ‘ಆತನಿಗೆ ಮನೆಯವರು ಯಾವುದೇ ತೊಂದರೆ ಕೊಡದಂತೆ, ಏನಾದರೂ ತೊಂದರೆ ಕೊಟ್ಟಲ್ಲಿ ತಂದೆ ತಾಯಿ ಮತ್ತು ಇತರ ಕೆಲವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.