ADVERTISEMENT

ಪಿರಿಯಾಪಟ್ಟಣ: ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 8:01 IST
Last Updated 27 ಜನವರಿ 2026, 8:01 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಪಿರಿಯಾಪಟ್ಟಣ: ತಾಲ್ಲೂಕಿನ ಎಚ್. ಮಠದ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ನಿವಾಸಿ ಮಹದೇವ ಎಂಬುವರ ಪತ್ನಿ ಹೇಮಲತಾ (38), ಮಗಳು ಅನು (15) ಹಾಗೂ ಮಗ ಚೇತನ್ (13) ಮೃತರು. ‘ಗಂಡ, ಅತ್ತೆ, ಮಾವ ಕಿರುಕುಳ ನೀಡುತ್ತಿದ್ದರೆಂದು ಹೇಮಲತಾ ಪತ್ರ ಬರೆದಿಟ್ಟಿದ್ದು, ಆರೋಪಿ ಮಹದೇವನನ್ನು ಬಂಧಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಈ ಮೂವರ ಶವಗಳು ತಂಬಾಕು ಬ್ಯಾರನ್‌ ಪೋಲ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

‘ಆತ್ಮಹತ್ಯೆಗೆ ಮಹದೇವ್ ಮತ್ತು ಆತನ ತಂದೆ– ತಾಯಿ ಕಾರಣ ಕಾರಣ’ ಎಂದು ಆರೋಪಿಸಿ ಹೇಮಲತಾ ಅವರ ಸಹೋದರ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಪಿಐ ಗೋವಿಂದ ರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.