ADVERTISEMENT

ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:28 IST
Last Updated 11 ಜೂನ್ 2019, 16:28 IST

ಮೈಸೂರು: ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯಾಗಿದೆ. ಈ ಸ್ಥಾನಕ್ಕೆ ನೂತನ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಅಶೋಕಪುರಂ ಪೊಲೀಸ್ ಠಾಣೆಗೆ ಸಿದ್ದರಾಜು ಪಿ.ಎಂ, ಹೆಬ್ಬಾಳ–ಗುರುಪ್ರಸಾದ್‌ ಎ, ದೇವರಾಜ–ಪ್ರಸನ್ನಕುಮಾರ್, ಉದಯಗಿರಿ–ಸಂತೋಷ್‌ ಪಿ.ಪಿ, ಆಲನಹಳ್ಳಿ–ಮಂಜು ಕೆ.ಎಂ. ಸಿದ್ಧಾರ್ಥ ನಗರ–ಅರುಣಕುಮಾರಿ, ಲಕ್ಷ್ಮೀಪುರಂ–ಗಂಗಾಧರ ಎಸ್, ಮೈಸೂರು ಸಿಟಿ ಸಿಸಿಬಿಗೆ ಮಲ್ಲೇಶ ಎ, ಸಿಸಿಐಬಿಗೆ ಅಶೋಕ್‌ಕುಮಾರ್ ಟಿ, ದೇವರಾಜ ಟ್ರಾಫಿಕ್ ಪೊಲೀಸ್ ಠಾಣೆಗೆ ಸೂರಜ್ ಪಿ.ಎ, ಕೆ.ಆರ್.ಟ್ರಾಫಿಕ್‌ ಪೊಲೀಸ್ ಠಾಣೆಗೆ ಜಗದೀಶ್‌ ಆರ್‌. ನೂತನ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ನಿಯೋಜನೆಗೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT