ADVERTISEMENT

ರಾಜಕಾರಣದ ಬಗ್ಗೆ ಸಾಹಿತ್ಯ ರಚನೆಯಾಗಲಿ: ಎಚ್‌.ವಿಶ್ವನಾಥ್‌ ಅಭಿಪ್ರಾಯ

ರಾಜಕೀಯ ಅಕಾಡೆಮಿ ಸ್ಥಾಪಿಸಲು ಎಚ್‌.ವಿಶ್ವನಾಥ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 2:48 IST
Last Updated 22 ಅಕ್ಟೋಬರ್ 2020, 2:48 IST
ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪುಸ್ತಕ ಬಿಡುಗಡೆ ಮಾಡಿದರು. ಐತಿಚಂಡ ರಮೇಶ್‌ ಉತ್ತಪ್ಪ, ಡಾ.ನಿರಂಜನ ವಾನಳ್ಳಿ, ಶಿವಾನಂದ ತಗಡೂರು, ಸಿ.ಕೆ.ಮಹೇಂದ್ರ ಇದ್ದಾರೆ
ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪುಸ್ತಕ ಬಿಡುಗಡೆ ಮಾಡಿದರು. ಐತಿಚಂಡ ರಮೇಶ್‌ ಉತ್ತಪ್ಪ, ಡಾ.ನಿರಂಜನ ವಾನಳ್ಳಿ, ಶಿವಾನಂದ ತಗಡೂರು, ಸಿ.ಕೆ.ಮಹೇಂದ್ರ ಇದ್ದಾರೆ   

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರಾಜಕೀಯವೇ ಉಸಿರಾಗಿದ್ದು, ಅದು ಮಲಿನವಾಗದಂತೆ ನೋಡಿಕೊಳ್ಳಲು ರಾಜಕಾರಣದ ಬಗ್ಗೆ ಹೆಚ್ಚೆಚ್ಚು ಸಾಹಿತ್ಯ ರಚನೆಯಾಗಬೇಕು ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಪತ್ರಕರ್ತರ ಸಂಘ ಹಾಗೂ ತನು ಮನು ಪ್ರಕಾಶನ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ `ಮತ ಭಿಕ್ಷೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಮಕ್ಕಳ ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಶರಣ ಸಾಹಿತ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಬೆಳೆದು ನಿಂತಿದೆ. ಆದರೆ ರಾಜಕೀಯ ಸಾಹಿತ್ಯ ಎಂಬುದಿಲ್ಲ. ಇತರ ಸಾಹಿತ್ಯ ಪ್ರಕಾರಗಳಂತೆ ರಾಜಕೀಯದ ಕುರಿತಾಗಿಯೂ ಸಾಹಿತ್ಯ ರಚನೆಯಾಗಬೇಕು. ಅಂತಹ ವೇದಿಕೆ ಸೃಷ್ಟಿಸಲು ರಾಜಕೀಯ ಅಕಾಡೆಮಿ ಸ್ಥಾಪಿಸಬೇಕು ಎಂದು ಹೇಳಿದರು.

ADVERTISEMENT

‌ಪ್ರತಿವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯ ವಿಷಯಗಳ ಚರ್ಚೆಗೆ ಪ್ರತ್ಯೇಕವಾಗಿ ಒಂದು ಗೋಷ್ಠಿ ಆಯೋಜಿಸುವುದಿಲ್ಲ. ರಾಜಕೀಯ ವ್ಯವಸ್ಥೆಯಿಂದಲೇ ಹಣ ಪಡೆದು ಆಯೋಜನೆಯಾಗುವ
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಕುರಿತ ವಿಷಯಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ತನು ಮನು ಪ್ರಕಾಶನದ ಮಾಲೀಕ ಮಾನಸ, ಕೃತಿಯ ಲೇಖಕ ಐತಿಚಂಡ ರಮೇಶ್ ಉತ್ತಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.