
ಪ್ರಜಾವಾಣಿ ವಾರ್ತೆ
ನಂಜನಗೂಡು: ನಗರದಲ್ಲಿ ಶುಕ್ರವಾರ ರಾತ್ರಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಿಂದ ಜರುಗುವ ಅಂಧಕಾಸುರ ವಧೆ ಕಾರ್ಯಕ್ರಮದಲ್ಲಿ ಉತ್ವ ಮೂರ್ತಿಯನ್ನು ಹೊತ್ತ ಸಹಾಯಕ ಅರ್ಚಕ ಶಂಕರ ಉಪಾಧ್ಯಾಯ(55) ಹೃದಯಾಘಾತದಿಂದ ಕುಸಿದು ಬಿದ್ದುಮೃತಪಟ್ಟರು.
ನಗರದ ರಾಕ್ಷಸ ಮಂಟಪ ವೃತ್ತದಲ್ಲಿ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಅರ್ಚಕ ಉಪಾಧ್ಯಾಯ ಉತ್ಸವಮೂರ್ತಿಯಿದ್ದ ಹೊತ್ತ ಪಲ್ಲಕ್ಕಿಗೆ ಭುಜ ಕೊಟ್ಟ ನಡೆಯುತ್ತಿದ್ದ ಕೆಲವೇ ಸೆಕೆಂಡ್ ಗಳಲ್ಲಿ ಕುಸಿದು ಬಿದ್ದರು,ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯ ರವರ ನೆರವಿಗೆ ಧಾವಿಸಿದರು.ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.