ADVERTISEMENT

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೊಠಡಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:16 IST
Last Updated 16 ಡಿಸೆಂಬರ್ 2025, 6:16 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಮಂಡಿ ಠಾಣೆ ಅಧಿಕಾರಿ, ಸಿಬ್ಬಂದಿ ಸೋಮವಾರ ಕೊಠಡಿಗಳ ಪರಿಶೀಲನೆ ನಡೆಸಿದರು.

ADVERTISEMENT

ಭದ್ರತಾ ಕೊಠಡಿ 23ರಲ್ಲಿದ್ದ ಆಕಾಶ್‌ ಅವರಲ್ಲಿದ್ದ ₹ 500 ಹಾಗೂ ಕೊಠಡಿ ಸಂಖ್ಯೆ 17ರಲ್ಲಿ ದೊರೆತ ಮಣ್ಣಿನ ಚಿಲುಮೆ ವಶಪಡಿಸಿಕೊಂಡಿದ್ದಾರೆ. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 ಗ್ರಾಂ ತೂಕದ ಚಿನ್ನದ ಸರ ಕಳವು

ಮೈಸೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ 24 ಗ್ರಾಂ ತೂಕದ ಚಿನ್ನದ ಸರ ಕಳುವಾಗಿದೆ ಎಂದು ನಗರದ ಕೆ.ಆರ್.ವನಂ ಬಡಾವಣೆಯ ನಿವಾಸಿ ವನಜಾಕ್ಷಿ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾರೆ.

‘ನ. 11ರಂದು ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮೈಸೂರಿಗೆ ಬರುತ್ತಿದ್ದೆ. ಈ ವೇಳೆ ಬಸ್‌ನಲ್ಲಿ ನನ್ನ ಕತ್ತಿನಲ್ಲಿದ್ದ ಚಿನ್ನದ ಸರ ತುಂಡಾಗಿದೆ ಎಂದು ಹೇಳಿ ಮಹಿಳೆಯೊಬ್ಬರು ಸರವನ್ನು ಕೈಗೆ ನೀಡಿದ್ದು, ಅದನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ಬಸ್‌ನಿಂದ ಇಳಿದು ಬ್ಯಾಗ್ ನೋಡಿದಾಗ ಚಿನ್ನದ ಸರದೊಂದಿಗೆ ಎಟಿಎಂ ಕಾರ್ಡ್‌ ಕಳವಾಗಿತ್ತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.