ADVERTISEMENT

ಪಿಯು ಪೂರಕ ಪರೀಕ್ಷೆ: 179 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 3:00 IST
Last Updated 13 ಆಗಸ್ಟ್ 2022, 3:00 IST

ಮೈಸೂರು: ದ್ವಿತೀಯ ಪಿಯು ಪೂರಕ ಪರೀಕ್ಷೆ ಶುಕ್ರವಾರ ಆರಂಭಗೊಂಡಿತು.

ಮೊದಲ ದಿನ, ಕನ್ನಡ ವಿಷಯದ ಪರೀಕ್ಷೆ ನಡೆಯಿತು. 2,177 ಮಂದಿ ನೋಂದಾಯಿಸಿದ್ದರು. ಅವರ ಪೈಕಿ 1,998 ವಿದ್ಯಾರ್ಥಿಗಳು ಹಾಜರಾದರು. 179 ಮಂದಿ ಗೈರು ಹಾಜರಾದರು. ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಡಿಡಿಪಿಯು ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ಮಹಾರಾಜ, ಮಹಾರಾಣಿ, ಡಿ.ಬನುಮಯ್ಯ, ಕೃಷ್ಣರಾಜ, ಸಂತ ಫಿಲೋಮಿನಾ, ಜೆಎಸ್‌ಎಸ್, ಎಸ್‌ಬಿಆರ್‌ಆರ್‌ ಮಹಾಜನ, ಶಾರದಾ ವಿಲಾಸ ಪದವಿ ಪೂರ್ವ ಕಾಲೇಜು ಕಾಲೇಜಿನಲ್ಲಿ ಮತ್ತು ಜಿಲ್ಲೆಯ ತಾಲ್ಲೂಕು ಕೇಂದ್ರಸ್ಥಾನದಲ್ಲಿನ 7 ಸೇರಿ 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ADVERTISEMENT

ಆ.25ರವರೆಗೆ ಪರೀಕ್ಷೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.