ನಂಜನಗೂಡು: ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಪ್ರತೀಕ ಸನ್ನಿಧಾನದಲ್ಲಿ ಭಾನುವಾರ ರಾಘವೇಂದ್ರ ಸ್ವಾಮಿಯ 354ನೇ ವರ್ಷದ ಆರಾಧನಾ ಮಹೋತ್ಸವದ ಪ್ರಯುಕ್ತ ಪೂರ್ವಾರಾಧನೆ ಸೇರಿದಂತೆ ಸಕಲ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಮಠದಲ್ಲಿ ಬೆಳಿಗ್ಗೆ ರಾಯರ ಪಾದಪೂಜೆ, ಪಂಚಾಮೃತ ಸೇವೆ, ಮಹಾಮಂಗಳಾರತಿ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ವಿದ್ವಾನ್ ಭಾನುಸಿಂಹ ಅವರು ದಾಸವಾಣಿ ನಡೆಸಿಕೊಟ್ಟರು.
ಶ್ರೀರಾಘವೇಂದ್ರಸ್ವಾಮಿಗಳು ಬೃಂದಾವನ ಪ್ರವೇಶ ಮಾಡಿದ 354ನೇ ವರ್ಷದ ಸುದಿನವಾದ ಸೋಮವಾರ ಹಲವು ಧಾರ್ಮಿಕ ಪೂಜಾ ಕಾರ್ಯ ನಡೆಸಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಗುವುದು.
ಆ.12ರಂದು ಮಂಗಳವಾರ ಮಠದ ಪ್ರಕಾರದಲ್ಲಿ ಮಹಾರಥೋತ್ಸವ ಜರುಗಲಿದೆ. 13ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ.
ಆರಾಧಾನಾ ಮಹೋತ್ಸವ ಅಂಗವಾಗಿ ಮಠದ ಆವರಣ ಸುತ್ತ ಹೂವಿನ ಅಲಂಕಾರವ ಮಾಡಲಾಗಿತ್ತು. ಸಂಜೆ ವೇಳೆ ಸಿ.ಎಸ್.ಕೇಶವಚಂದ್ರ ಅವರಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ ಹಾಗೂ ವಿದ್ವಾನ್ ಚಂದನ್ ಕುಮಾರ್ ಅವರಿಂದ ಕೊಳಲು ವಾದನ ಹಮ್ಮಿಕೊಳ್ಳಲಾಗಿದೆ ಎಂದು ಮಠದ ವ್ಯವಸ್ಥಾಪಕ ಕೆ.ಸುಧಾಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.