ADVERTISEMENT

ಸರಿಯಾದ ಮಾರ್ಗದಲ್ಲಿ ಮಕ್ಕಳ ಬೆಳೆಸಿ; ಶಾಸಕ ಡಿ.ರವಿಶಂಕರ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:31 IST
Last Updated 8 ಡಿಸೆಂಬರ್ 2025, 6:31 IST
ಕೆ.ಆರ್.ನಗರ ಬಿ.ಎಸ್.ಮಾದಪ್ಪ ಪಬ್ಲಿಕ್ ಶಾಲೆಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಆರ್.ಕೃಷ್ಣಪ್ಪ, ಶಿವುನಾಯಕ್, ಕೆ.ಪಿ.ಪ್ರಭುಶಂಕರ್, ಹರಿಪ್ರಸಾದ್, ನಿರಂಜನ ಎಸ್.ಬಳೆ ಭಾಗವಹಿಸಿದ್ದರು
ಕೆ.ಆರ್.ನಗರ ಬಿ.ಎಸ್.ಮಾದಪ್ಪ ಪಬ್ಲಿಕ್ ಶಾಲೆಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಆರ್.ಕೃಷ್ಣಪ್ಪ, ಶಿವುನಾಯಕ್, ಕೆ.ಪಿ.ಪ್ರಭುಶಂಕರ್, ಹರಿಪ್ರಸಾದ್, ನಿರಂಜನ ಎಸ್.ಬಳೆ ಭಾಗವಹಿಸಿದ್ದರು   

ಕೆ.ಆರ್.ನಗರ: ‘ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರದ್ದಾಗಿದೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಇಲ್ಲಿನ ಬಿ.ಎಸ್.ಮಾದಪ್ಪ ಪಬ್ಲಿಕ್ ಶಾಲೆಯಿಂದ ಶನಿವಾರ ಸಂಜೆ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ಮತ್ತು ಪೋಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಗುರು ಹಿರಿಯರಿಗೆ, ನಮ್ಮ ಸಂಸ್ಕೃತಿ ಗೌರವಿಸುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು. ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಜೊತೆಗೆ ಸುಸಂಸ್ಕೃತರನ್ನಾಗಿ ಬೆಳೆಯುವಂತೆ ನೊಡಿಕೊಳ್ಳಬೇಕು. ಈ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು’ ಎಂದರು.

ADVERTISEMENT

‘ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಹೇಳುವುದು, ತಿದ್ದುವುದು, ಸರಿ ಮಾರ್ಗದರ್ಶನ ನೀಡುವುದು ಮನೆಯಿಂದಲೇ ಪ್ರಾರಂಭವಾಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಮನೋಭಾವದಿಂದ ಹೊರಗೆ ಬರಬೇಕು’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಮುಖಂಡ ಕೆ.ಪಿ.ಪ್ರಭುಶಂಕರ್ ಮಾತನಾಡಿದರು. ಮುಖಂಡ ಶಿವುನಾಯಕ್, ಸಿಆರ್‌ಪಿ ಹರಿಪ್ರಸಾದ್, ಸಂಸ್ಥೆಯ ಅಧ್ಯಕ್ಷ ನಿರಂಜನ ಎಸ್.ಬಳೆ, ಶಿಕ್ಷಕರಾದ ಜಿ.ಆರ್.ನಂದಿನಿ, ಕೆ.ಪಿ.ಮನುಜಾ, ಬಿ.ಎಂ.ಪವಿತ್ರಾ, ಬಿ.ಕೆ.ಗೀತಾ, ಡಿ.ಪಿ.ಅರ್ಪಣಾ, ವಿ.ಎಸ್.ಚೈತ್ರಾ, ಬಿ.ಯು.ಸುಪ್ರಿಯಾ, ಮರಿಯಾ ರೋಸ್, ಎಸ್.ಆರ್.ಗೀತಾ, ಅಫ್ಸಾ ಮರಿಯಮ್, ಎಸ್.ಕೃಷ್ಣೇಗೌಡ, ಸಿಬ್ಬಂದಿ ಲೀಲಾ, ಗೀತಾ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.