ADVERTISEMENT

ಮೈಸೂರು: ಜ.18ರಂದು ‘ರಜತ ಗಾನ ಶಾರದೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 11:49 IST
Last Updated 17 ಜನವರಿ 2026, 11:49 IST
   

ಮೈಸೂರು: ಇಲ್ಲಿನ ಕುವೆಂಪುನಗರದ ಶಾರದಾ ಕಲಾ ಕೇಂದ್ರದಿಂದ ಜ. 18ರಂದು ನಗರದ ಗಾನಭಾರತಿ ರಮಾಗೋವಿಂದ ಸಭಾಂಗಣದಲ್ಲಿ ‘ರಜತ ಗಾನ ಶಾರದೆ ಕಾರ್ಯಕ್ರಮ’ ಆಯೋಜಿಸಲಾಗಿದೆ’ ಎಂದು ನಿರ್ದೇಶಕಿ ರೇಖಾ ವೆಂಕಟೇಶ್ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಕೇಂದ್ರದ ವಿದ್ಯಾರ್ಥಿಗಳು ‘ಮಕ್ಕಳ ಕಲರವ’ ಕಾರ್ಯಕ್ರಮ ಪ್ರಸ್ತುತಪಡಿಸುವರು. ಶಾಸಕ ಟಿ.ಎಸ್. ಶ್ರೀವತ್ಸ, ಹಾಸ್ಯ ಭಾಷಣಕಾರ ಮೈಸೂರು ಆನಂದ್, ನಿವೃತ್ತ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮಿ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಹೇಳಿದರು.

‘ಸಂಜೆ 6ರಿಂದ 8ರವರೆಗೆ ಸರಸ್ವತಿ ಕುರಿತ ಹಾಡುಗಳ ‘ಗಾನ ಸರಸ್ವತಿ’ ಕಾರ್ಯಕ್ರಮ ನಡೆಯಲಿದೆ. ವಿದುಷಿ ಎಚ್.ಆರ್. ಲೀಲಾವತಿ, ವಾಣಿಜ್ಯೋದ್ಯಮಿ ಶ್ರೀಹರಿ ದ್ವಾರಕನಾಥ್‌, ಗಾಯಕಿ ರೋಹಿಣಿ ಮೋಹನ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಗಣೇಶ್‌ಭಟ್‌, ಪ್ರಸನ್ನಕುಮಾರ್, ಸಿ.ವಿಶ್ವನಾಥ್‌, ಗುರುದತ್‌, ಅನಂತ್‌ ಕೃಷ್ಣಶರ್ಮ ವಾದ್ಯ ಸಹಕಾರ ನೀಡುವರು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಹೇಮಾ ನಾಗೇಂದ್ರ, ಸುಜಯ್, ಶ್ರೀನಿವಾಸ್, ದತ್ತಾತ್ರಿ ಜೋಯಿಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.