ADVERTISEMENT

ಮನಸೆಳೆದ ಗಾಲಿಕುರ್ಚಿ ರ‍್ಯಾಲಿ

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ಅಂಗವಿಕಲರು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 10:14 IST
Last Updated 14 ಡಿಸೆಂಬರ್ 2019, 10:14 IST
ಜೆಎಸ್‌ಎಸ್‌ ಪಿಸಿಯೋಥೆರಪಿ ಕಾಲೇಜು ಮತ್ತು ಜೆಎಸ್ಎಸ್ ದೈಹಿಕ ವೈದ್ಯಕೀಯ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ’ಒಳಗೊಳ್ಳುವಿಕೆಗೆ ಪ್ರೋತ್ಸಾಹ‘ ಕಾರ್ಯಕ್ರಮದಲ್ಲಿ ಅಂಗವಿಕಲರು ಗಾಲಿಕುರ್ಚಿಯಲ್ಲಿ ರ್‍ಯಾಲಿ ನಡೆಸಿದರು
ಜೆಎಸ್‌ಎಸ್‌ ಪಿಸಿಯೋಥೆರಪಿ ಕಾಲೇಜು ಮತ್ತು ಜೆಎಸ್ಎಸ್ ದೈಹಿಕ ವೈದ್ಯಕೀಯ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ’ಒಳಗೊಳ್ಳುವಿಕೆಗೆ ಪ್ರೋತ್ಸಾಹ‘ ಕಾರ್ಯಕ್ರಮದಲ್ಲಿ ಅಂಗವಿಕಲರು ಗಾಲಿಕುರ್ಚಿಯಲ್ಲಿ ರ್‍ಯಾಲಿ ನಡೆಸಿದರು   

ಮೈಸೂರು: ಜಾಥಾ ನಡೆಸಲು ನಾವ್ ರೆಡಿ, ನಾಟಕ ಅಭಿನಯಿಸಲೂ ಸೈ, ಹಾಡು ಹೇಳಲು ನಾವ್ ಮುಂದು...

ಹೀಗೆ ಆತ್ಮವಿಶ್ವಾಸದ ಹೆಜ್ಜೆಗಳನ್ನು ಇಟ್ಟವರು ಜೆಎಸ್ಎಸ್ ದೈಹಿಕ ವೈದ್ಯಕೀಯ ಮತ್ತು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಅಂಗವಿಕಲರು.

ಊನಗೊಂಡಿರುವ ದೇಹದ ಅಂಗಾಂಗಗಳು ಸಾಮಾನ್ಯರಂತೆ ಬದುಕಲು ಅಡ್ಡಿಯಾಗುವುದಿಲ್ಲ. ಇಚ್ಛಾಶಕ್ತಿ ಹಾಗೂ ಸತತ ಪ್ರಯತ್ನಗಳಿಂದ ಎಲ್ಲ ಬಗೆಯ ವೈಕಲ್ಯಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದನ್ನು ಸಾಬೀತುಪಡಿಸಿದರು.

ADVERTISEMENT

ಜೆಎಸ್‌ಎಸ್‌ ಪಿಸಿಯೋಥೆರಪಿ ಕಾಲೇಜು ಮತ್ತು ಜೆಎಸ್ಎಸ್ ದೈಹಿಕ ವೈದ್ಯಕೀಯ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಒಳಗೊಳ್ಳುವಿಕೆಗೆ ಪ್ರೋತ್ಸಾಹ’ ಕಾರ್ಯಕ್ರಮದಲ್ಲಿ ಕಂಡು ಪಾಲ್ಗೊಂಡಿದ್ದ ಅವರೆಲ್ಲ ತಮ್ಮ ಸಾಮರ್ಥ್ಯವನ್ನು ಕಣ್ಣಮುಂದೆ ತೋರ್ಪಡಿಸಿದರು.

ಜೆಎಸ್ಎಸ್ ಮಹಾವಿದ್ಯಾಪೀಠದಿಂದ ಆರಂಭವಾದ ಗಾಲಿಕುರ್ಚಿ ರ‍್ಯಾಲಿಯು ನಗರದ ಪ್ರಮುಖ ರಸ್ತೆಗಳ ಮೂಲಕ ಶಿವರಾತ್ರಿ ರಾಜೇಂದ್ರ ಸಭಾಂಗಣಕ್ಕೆ ಬಂದಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಜೆ.ಮಮತಾ ಮಾತನಾಡಿ, ‘ಅಂಗವಿಕಲರ ಸಮಸ್ಯೆಗಳಿಗೆ, ಭಾವನೆಗಳಿಗೆ ಸರ್ಕಾರ ಸ್ಪಂದಿಸಿದೆ ಎನ್ನುವುದಾದರೆ ಅದು ಪ್ರಜಾಪ್ರಭುತ್ವ ಸಾರ್ಥಕವಾದಂತೆ’ ಎಂದು ಅಭಿಪ್ರಾಯಪಟ್ಟರು.

ಇದು ಕೇವಲ ಸಂಭ್ರಮಿಸುವ ದಿನವಲ್ಲ. ಸಂಭ್ರಮದ ಜತೆಗೆ, ತಮಗೆ ಏನು ಬೇಕು ಎನ್ನುವುದನ್ನು ಮುಕ್ತವಾಗಿ ಹಂಚಿಕೊಳ್ಳುವ ದಿನ. ಅಂಗವಿಕಲರ ಮುಖದಲ್ಲಿ ನಗು ತರಿಸಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ‘ಅಂಗವಿಕಲರ ಕುರಿತು ಜನರ ವರ್ತನೆ ಬದಲಾವಣೆಯಾಗಬೇಕುಎನ್ನುವುದು ಈ ಆಚರಣೆಯ ಉದ್ದೇಶ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.