ಮೈಸೂರು: ನಟ ರಿಷಬ್ ಶೆಟ್ಟಿ ಗುರುವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಾಧ್ಯಮದೊಂದಿಗೆ ಮಾತನಾಡಿ, 'ಕಾಂತಾರ ಚಾಪ್ಟರ್ 1 ಸಿನೆಮಾಕ್ಕೆ ದೇಶದಾದ್ಯಂತ ಜನ ಅದ್ಭುತ ಯಶಸ್ಸು ಕೊಟ್ಟಿದ್ದಾರೆ. ಸಿನೆಮಾದ ಯಶಸ್ಸು ಕನ್ನಡಿಗರಿಗೆ ಸಲ್ಲಿಸಬೇಕು. ಎಲ್ಲರಿಗೂ ಧನ್ಯವಾದಗಳು. ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಸಂತೋಷಗೊಂಡಿದ್ದೇನೆ. ತಾಯಿಯ ಆಶೀರ್ವಾದ ಇದ್ದ ಕಾರಣವೇ ಸಿನಿಮಾ ಈ ಮಟ್ಟಕ್ಕೆ ಬೆಳೆದಿದೆ' ಎಂದರು.
ಕಾಂತಾರ ಸಿನಿಮಾಕ್ಕೆ ದೈವಾರಾಧಕರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ 'ನಾನು ದೇವರನ್ನು ನಂಬುವವನು ಸಿನಿಮಾದಲ್ಲಿ ದೈವವನ್ನು ತೋರಿಸುವಾಗ ದೈವಕ್ಕೆ ಅಪಚಾರ ಆಗಬಾರದು ಎಂದು ಹಿರಿಯರ ಮಾರ್ಗದರ್ಶನದಲ್ಲಿ ಚಿತ್ರೀಕರಣ ಮಾಡಿದ್ದೇನೆ. ಎಲ್ಲರಿಗೂ ಅವರದ್ದೇ ಆದ ಆಲೋಚನೆ ಇರುತ್ತದೆ. ಅಭಿಪ್ರಾಯ ಹೇಳುವ ಹಕ್ಕು ಎಲ್ಲರಿಗೂ ಇದೆ. ಮುಂದೆಯೂ ದೈವವನ್ನು ತೆರೆಯ ಮುಂದೆ ತರುವವರು ಎಚ್ಚರಿಕೆ ವಹಿಸಬೇಕು' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.