ADVERTISEMENT

ರಸ್ತೆ ಉಬ್ಬು: ಬಸ್ಸಿನಿಂದ ಬೇರ್ಪಟ್ಟ ಚಕ್ರಗಳು

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:52 IST
Last Updated 29 ಜನವರಿ 2023, 6:52 IST
ಹುಣಸೂರು ತಾಲ್ಲೂಕಿನ ಯಶೋಧ ಪುರದ ಬಳಿ ರಸ್ತೆ ಉಬ್ಬಿನಿಂದಾಗಿ ಬಸ್ ಹಿಂಬದಿ ಚಕ್ರಗಳು ಬೇರ್ಪಟ್ಟವು
ಹುಣಸೂರು ತಾಲ್ಲೂಕಿನ ಯಶೋಧ ಪುರದ ಬಳಿ ರಸ್ತೆ ಉಬ್ಬಿನಿಂದಾಗಿ ಬಸ್ ಹಿಂಬದಿ ಚಕ್ರಗಳು ಬೇರ್ಪಟ್ಟವು   

ಹುಣಸೂರು: ಮೈಸೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಯಶೋಧಪುರ ಬಳಿ ನಿರ್ಮಿಸಿದ ರಸ್ತೆ ಉಬ್ಬಿನಿಂದಾಗಿ ಶನಿವಾರ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿ ಚಕ್ರಗಳ ಸ್ಪ್ರಿಂಗ್‌ ಪ್ಲೇಟ್‌ ತುಂಡಾಗಿ ಪ್ರತ್ಯೇಕಗೊಂಡಿದೆ.

‘ನಗರದಿಂದ 4 ಕಿ.ಮೀ ದೂರದಲ್ಲಿರುವ ಗ್ರಾಮದ ಬಳಿ ವಾಹನಗಳ ವೇಗ ನಿಯಂತ್ರಿಸಲು ರಸ್ತೆ ಉಬ್ಬು ಹಾಕಲಾಗಿತ್ತು. ಈ ಬಗ್ಗೆ ಸೂಚನಾ ಫಲಕ ಅಳವಡಿಸಿರಲಿಲ್ಲ. ಶನಿವಾರ ಬೆಳಿಗ್ಗೆ 11.30ರ ಸುಮಾರಿಗೆ ವೇಗವಾಗಿ ಬಂದ ಬಸ್‌ ಚಾಲಕ, ರಸ್ತೆ ಉಬ್ಬನ್ನು ಕಂಡು ಬ್ರೇಕ್‌ ಹಾಕಿದರೂ ನಿಯಂತ್ರಣ ಸಾಧ್ಯವಾಗಿಲ್ಲ. ರಸ್ತೆ ಉಬ್ಬನ್ನು ಹಾರಿಸುತ್ತಿದ್ದಂತೆ ಬಸ್ ಹಿಂಬದಿಯ ನಾಲ್ಕು ಚಕ್ರಗಳು ಪ್ರತ್ಯೇಕಗೊಂಡವು. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ನಗರ ಠಾಣೆ ಪೊಲೀಸರು ಹೇಳಿದರು.

‘ಬಸ್‌ ಕೆ.ಆರ್.ನಗರ ಡಿಪೊಗೆ ಸೇರಿದ್ದು, ಸೋಮವಾರಪೇಟೆಯಿಂದ ಮೈಸೂರಿಗೆ ತೆರಳುತ್ತಿತ್ತು’ ಎಂದು ಹುಣಸೂರು ರಸ್ತೆ ಸಾರಿಗೆ ಡಿಪೊ ವ್ಯವಸ್ಥಾಪಕ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.