ADVERTISEMENT

ಚಿಂತನೆ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ಹಿರಿದು: ಪ್ರಾಧ್ಯಾಪಕ ವಿಜಯ ಶೇಷಾದ್ರಿ

ಸಾಹಿತ್ಯ ಜಾಗೃತಿ, ಸಾಂಸ್ಕೃತಿಕ ಉತ್ಸವ ‘ದೇಸಿ ಹಬ್ಬ’

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:54 IST
Last Updated 24 ಫೆಬ್ರುವರಿ 2026, 6:54 IST
ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ‘ದೇಸಿ ಹಬ್ಬ’ ಕಾರ್ಯಕ್ರಮವನ್ನು ಪ್ರಾಧ್ಯಾಪಕ ವಿಜಯ ಶೇಷಾದ್ರಿ ಉದ್ಘಾಟಿಸಿದರು
ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ‘ದೇಸಿ ಹಬ್ಬ’ ಕಾರ್ಯಕ್ರಮವನ್ನು ಪ್ರಾಧ್ಯಾಪಕ ವಿಜಯ ಶೇಷಾದ್ರಿ ಉದ್ಘಾಟಿಸಿದರು   

ಮೈಸೂರು: ‘ಸಾಹಿತ್ಯವು ವಿಮರ್ಶಾತ್ಮಕ ಚಿಂತನೆ ಮತ್ತು ಮಾನವೀಯತೆ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ವಿಜಯ ಶೇಷಾದ್ರಿ ಹೇಳಿದರು.

ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಘಟಕ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಈಚೆಗೆ ನಡೆದ ಸಾಹಿತ್ಯ ಜಾಗೃತಿ, ಸಾಂಸ್ಕೃತಿಕ ಉತ್ಸವ ‘ದೇಸಿ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಜನರಲ್ಲಿ ಸಾಹಿತ್ಯದ ಮೆಚ್ಚುಗೆ ಬೆಳೆಸುವುದು ಮತ್ತು ಭಾರತೀಯ ಪ್ರಾದೇಶಿಕ ಸಂಸ್ಕೃತಿ ಹಾಗೂ ಭಾಷೆಗಳ ಶ್ರೀಮಂತಿಕೆ ಆಚರಿಸುವುದು ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

ADVERTISEMENT

ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕಿ ಶುಭಾ ಸಂಜಯ ಅರಸ್, ಮಾತೃಭಾಷೆಯ ಕಥನಶಕ್ತಿಯ ಮಹತ್ವ ಹಾಗೂ ಪ್ರಾದೇಶಿಕ ಭಾಷೆಗಳನ್ನು ಜೀವಂತವಾಗಿಡುವಲ್ಲಿ ಪುಸ್ತಕ ಕ್ಲಬ್‌ಗಳ ಪಾತ್ರದ ಕುರಿತು ತಿಳಿಸಿದರು.

ರೆಕ್ಟರ್ ಲೂರ್ದು ಪ್ರಸಾದ್ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ರೆ.ಫಾ.ಜ್ಞಾನಪ್ರಕಾಶಂ, ಪ್ರಾಂಶುಪಾಲ ರವಿ ಜೆ.ಡಿ.ಸಲ್ಡಾನ್ಹಾ, ಉಪ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಥಾಮಸ್ ಗುಣಸೀಲನ್, ಸ್ನಾತಕೋತ್ತರ ಸಂಯೋಜಕ ನೂರ್ ಮುಬಶೀರ್ ಸಿ.ಎ, ಸಾದೆಬೋಸ್, ಭಾಷಾ ವಿಭಾಗದ ಡೀನ್ ಆನಂದ್, ಅಕಾಡೆಮಿಕ್ ಡೀನ್ ಪೂರ್ಣಿಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.