ADVERTISEMENT

ರೋಟರಿ ಪಶ್ಚಿಮ; ನಾಗೇಶ್‌ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 15:25 IST
Last Updated 14 ಜುಲೈ 2024, 15:25 IST
ಮೈಸೂರು ರೋಟರಿ ಪಶ್ಚಿಮ ನೂತನ ಪದಾಧಿಕಾರಿಗಳಾಗಿ ಎಂ.ಎಲ್‌.ನಾಗೇಶ್‌ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು. ಸಮೀರ್‌ ಹರಿಯಾನಿ, ಎಂ.ರಾಜೀವ್‌, ಬಿ.ಚಂದ್ರ, ಜಿ.ಕೆ.ಸುಧೀಂದ್ರ ಪಾಲ್ಗೊಂಡರು
ಮೈಸೂರು ರೋಟರಿ ಪಶ್ಚಿಮ ನೂತನ ಪದಾಧಿಕಾರಿಗಳಾಗಿ ಎಂ.ಎಲ್‌.ನಾಗೇಶ್‌ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು. ಸಮೀರ್‌ ಹರಿಯಾನಿ, ಎಂ.ರಾಜೀವ್‌, ಬಿ.ಚಂದ್ರ, ಜಿ.ಕೆ.ಸುಧೀಂದ್ರ ಪಾಲ್ಗೊಂಡರು    

ಮೈಸೂರು: ರೋಟರಿ ಮೈಸೂರು ಪಶ್ಚಿಮದ ನೂತನ ಅಧ್ಯಕ್ಷರಾಗಿ ಎಂ.ಎಲ್‌.ನಾಗೇಶ್‌ ಅಧಿಕಾರ ಸ್ವೀಕರಿಸಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಅಧಿಕಾರ ಪದಗ್ರಹಣ ನಡೆಯಿತು. ರೋಟೇರಿಯನ್‌ ಸಮೀರ್‌ ಹರಿಯಾನಿ ಕಾರ್ಯಕ್ರಮ ನೆರವೇರಿಸಿದರು. ಕಾರ್ಯದರ್ಶಿಯಾಗಿ ಎಂ.ದೇವರಾಜು, ಪದಾಧಿಕಾರಿಗಳಾಗಿ ಆರ್‌.ಬಸವರಾಜು, ರಾಘವೇಂದ್ರ ಯರಗನಾಳ್‌, ಎಂ.ವಿ.ನಾಗೇಶ್‌, ರೆಜಿನಾಲ್ಡ್‌ ವೆಸ್ಲಿ, ಶ್ರೀಹರಿ, ಎಂ.ಡಿ.ರಾಘವೇಂದ್ರ ಪ್ರಸಾದ್‌, ಪ್ರತೀಕ್‌ ಮಂಡೊತ್‌, ಎಸ್‌.ಎ.ಮೋಹನ್‌ಕೃಷ್ಣ, ಟಿ.ಉಲ್ಲಾಸ್‌ ಪಂಡಿತ್‌, ಪ್ರತಿಭಾ ಪರೆರಾ, ಜ್ಯೋಸ್ನಾ ಬೆಳ್ಳಿಯಪ್ಪ, ಸೋನಿಯಾ ಮಂದಪ್ಪ, ಕೆ.ಕಲ್ಯಾಣ್‌ ಕುಮಾರ್‌ ರೆಡ್ಡಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್‌ ಗವರ್ನರ್‌ ಎಂ.ರಾಜೀವ್‌, ಝೋನಲ್‌ ಲೆಫ್ಟಿನೆಂಟ್‌ ಬಿ.ಚಂದ್ರ, ನಿಕಟಪೂರ್ವ ಅಧ್ಯಕ್ಷ ಜಿ.ಕೆ.ಸುಧೀಂದ್ರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.