ADVERTISEMENT

ರಬ್ಬರ್‌ ತಂತ್ರಜ್ಞಾನ ಕೇಂದ್ರ ಉದ್ಘಾಟನೆ ಏ. 30ರಂದು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:13 IST
Last Updated 28 ಏಪ್ರಿಲ್ 2025, 14:13 IST

ಮೈಸೂರು: ‘ಇಲ್ಲಿನ ಜೆಎಸ್ಎಸ್ ತಾಂತ್ರಿಕ ಸಂಸ್ಥೆಗಳ ಆವರಣದಲ್ಲಿ ಭಾರತೀಯ ರಬ್ಬರ್ ಸಂಸ್ಥೆಯಿಂದ ಆರಂಭಿಸಿರುವ ಪಾಲಿಮರ್ ವಿಜ್ಞಾನ ಮತ್ತು ರಬ್ಬರ್ ತಂತ್ರಜ್ಞಾನದ ‘ಡಿ.ಬ್ಯಾನರ್ಜಿ ಪ್ರಾವೀಣ್ಯ ಕೇಂದ್ರ’ದ ಉದ್ಘಾಟನೆ ಏ. 30ರಂದು ಬೆಳಿಗ್ಗೆ 11.15ಕ್ಕೆ ನಡೆಯಲಿದೆ.

‘ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಜೆಕೆ ಟೈರ್ಸ್‌ ಕಂಪನಿ ಸಿಎಂಡಿ ರಘುಪತಿ ಸಿಂಘಾನಿಯಾ ಉದ್ಘಾಟಿಸುವರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಆರ್. ಮುಖೋಪಾಧ್ಯಾಯ, ವಿ.ಕೆ. ಮಿಶ್ರಾ, ಪಿ.ಕೆ. ಮೊಹಮ್ಮದ್ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ಸಂಸ್ಥೆಯ ಸಲಹೆಗಾರ ಎಸ್. ವಾಸುದೇವರಾವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಬ್ಬರ್ ತಂತ್ರಜ್ಞಾನ, ಶಿಕ್ಷಣ ತರಬೇತಿ, ಸಂಶೋಧನೆ, ಪರೀಕ್ಷೆ ಮತ್ತು ಕೌಶಲ ಅಭಿವೃದ್ಧಿಯಲ್ಲಿ ಭಾರತೀಯ ರಬ್ಬರ್ ಸಂಸ್ಥೆಗೆ ನೆರವಾಗುವುದು ಈ ಕೇಂದ್ರದ ಉದ್ದೇಶವಾಗಿದೆ’ ಎಂದರು.

ADVERTISEMENT

ಅಧಿಕಾರಿ ಮಲ್ಲಿಕಾರ್ಜುನಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.