ನಂಜನಗೂಡು: ‘ನಗರ ಸ್ವಚ್ಛವಾಗಿಡುವ ಮೂಲಕ ನಾಗರಿಕರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರು ಸೇವೆ ಅನನ್ಯ. ಅವರ ಕಾಯಕ ನಿಷ್ಠೆಯನ್ನು ನಾವೆಲ್ಲರೂ ಸ್ಮರಿಸಿ ಗೌರವಿಸಬೇಕು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದ ನಂದಿ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ನಗರಸಭೆ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಸ್ವಚ್ಛತೆ ಕಾಪಾಡುವ ಸಲುವಾಗಿ ಮಳೆ, ಚಳಿ ಬಿಸಿಲು ಲೆಕ್ಕಿಸದೆ ಪೌರಕಾರ್ಮಿಕರು ಪ್ರತಿನಿತ್ಯ ತಮ್ಮ ಕಾಯಕ ಮಾಡುವ ಮೂಲಕ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಉತ್ತಮ ಆರೋಗ್ಯಕರ ಪರಿಸರ ನಿರ್ಮಿಸುವಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ದೊಡ್ಡ ಜವಾಬ್ದಾರಿಯಿದ್ದು, ಮನೆಯಿಂದಲೇ ತ್ಯಾಜ್ಯ ವಿಂಗಡಿಸಿ ಸ್ವಚ್ಛತೆಗೆ ಸಹಕಾರ ನೀಡಬೇಕು. ಹಸಿ ಕಸ, ಒಣ ಕಸ ವಿಂಗಡಿಸಿ ಕಸ ವಿಲೇವಾರಿ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಬೆಂಗಳೂರಿನಂತ ನಗರಗಳಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸದೆ ಕೊಟ್ಟಲ್ಲಿ ದಂಡ ವಿಧಿಸುವ ನಿಯಮವಿದೆ. ನಗರ ಸ್ವಚ್ಛವಾಗಿಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.
ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ಸೇವಾ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ಜಯ ಸಿಕ್ಕಿದೆ. 2017ರ ಆದೇಶದ ನಂತರ ಹಂತ ಹಂತವಾಗಿ ಸೌಲಭ್ಯ ದೊರಕಿಸಿಕೊಟ್ಟು ಪೌರಕಾರ್ಮಿಕರಿಗೆ ಸೇವಾ ಭದ್ರತೆ ನೀಡಲಾಗುತ್ತಿದೆ. ನಗರಸಭೆಯ ಎಸ್ಎಫ್ ಅನುದಾನದ ಅಡಿಯಲ್ಲಿ ₹14.37 ಲಕ್ಷ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ, ಪೌರಕಾರ್ಮಿಕರಿಗೆ ₹15ಲಕ್ಷದವರೆಗೆ ಜೀವ ವಿಮೆ ಮಾಡಿಸಲು ನಿರ್ಧರಿಸಲಾಗಿದೆ. ಇದರ ವ್ಯಾಪ್ತಿಗೆ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಗಂಟಿಗಳು, ಚಾಲಕರು, ಸ್ವಚ್ಛತಾ ಸಿಬ್ಬಂದಿಗಳಿಗೂ ವಿಮೆಯ ರಕ್ಷಣೆ ದೊರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 12 ಮಂದಿ ಪೌರಕಾರ್ಮಿಕರನ್ನು ಗೌರವಿಸಲಾಯಿತು.
ಮುಖಂಡರಾದ ಕಳಲೆ ಕೇಶವಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ನಗರಸಭೆ ಸದಸ್ಯರಾದ ಗಂಗಾಧರ್, ಎಸ್.ಪಿ.ಮಹೇಶ್, ಎನ್.ಎಸ್.ಯೋಗೀಶ್, ಗಾಯತ್ರಿ, ಸಿದ್ದಿಕ್, ಸಿದ್ದರಾಜು, ಶ್ವೇತಲಕ್ಷ್ಮಿ, ಪಿ.ದೇವ, ಸೌಭಾಗ್ಯ, ರಮೇಶ್, ಕೆ.ಎಂ.ಬಸವರಾಜು, ರವಿ, ಮುಖಂಡರಾದ ಡಿ.ಆರ್. ರಾಜು, ಚೆಲುವರಾಜು, ಗೋವಿಂದರಾಜು, ಸತೀಶ್, ಪ್ರಕಾಶ್, ಎಇಇ ಮಹೇಶ್, ಸಮಂತ್, ಮೈತ್ರಾದೇವಿ, ವಸಂತ, ಆದರ್ಶ ಇದ್ದರು.
ಸ್ವಚ್ಛತೆಗೆ ಸಹಕಾರ ನೀಡಲು ಸಲಹೆ ಹಸಿ ಕಸ, ಒಣ ಕಸ ವಿಂಗಡಿಸಲು ಮನವಿ 12 ಮಂದಿ ಪೌರಕಾರ್ಮಿಕರಿಗೆ ಗೌರವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.