ADVERTISEMENT

ಸರಗೂರು | ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ–ಪ್ರಾಂಶುಪಾಲ ರಮಾನಂದ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 3:14 IST
Last Updated 28 ಜನವರಿ 2026, 3:14 IST
ಸರಗೂರು ಸಮೀಪದ ತುಂಬಸೋಗೆ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು ಶಾಲಾ ಮತ್ತು ಕಾಲೇಜಿ ಕಾಲೇಜು ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಉದ್ಘಾಟನೆ ಯನ್ನು ಉಪನ್ಯಾಸ ರಮಾನಂದ್ ನೆರವೇರಿಸಿದರು.
ಸರಗೂರು ಸಮೀಪದ ತುಂಬಸೋಗೆ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜು ಶಾಲಾ ಮತ್ತು ಕಾಲೇಜಿ ಕಾಲೇಜು ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಉದ್ಘಾಟನೆ ಯನ್ನು ಉಪನ್ಯಾಸ ರಮಾನಂದ್ ನೆರವೇರಿಸಿದರು.   

ಸರಗೂರು: ‘ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ಪುಸ್ತಕವನ್ನು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳ ಓದು ಬದುಕಿನ ಭಾಗವಾಗಬೇಕು’ ಎಂದು ಮೈಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮಾನಂದ ತಿಳಿಸಿದರು.

ಸಮೀಪದ ತುಂಬಸೋಗೆ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆತ್ಮವಿಶ್ವಾಸ ಮತ್ತು ದೃಢತೆಯಿಂದ ಮಾತನಾಡಬೇಕು, ನಿಮ್ಮನ್ನು ನೀವೇ ನಂಬಬೇಕು. ನಿಮ್ಮಲ್ಲಿ ಸಾಧನೆ ಆಟ ಮತ್ತು ಛಲ ಇರಬೇಕು .

ADVERTISEMENT

ಪ್ರತಿ ವಿದ್ಯಾರ್ಥಿ ಕೈಯಲ್ಲಿ ಇದು ಸಾಧ್ಯ. ಆದ್ದರಿಂದ ಸಾಮಾನ್ಯ ಜ್ಞಾನ ಸಂಪಾದಿಸಬೇಕು. ಇದು ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ. ನೀವು ಶಿಕ್ಷಣದಲ್ಲಿ ಸಾಧನೆ ಮಾಡಿದರೆ ನಿಮ್ಮ ಪೋಷಕರು ಖುಷಿಯಾಗಿರುತ್ತಾರೆ. ಅವರ ಆಸೆ ಈಡೇರುತ್ತದೆ. ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಶಿಕ್ಷಣ ಅಗತ್ಯ ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ ಮಾತನಾಡಿ ಮಕ್ಕಳಿಗೆ ಸಾಧನೆ ಮುಖ್ಯ. ಈ ಸಾಧನೆಯಿಂದ ಪರೀಕ್ಷೆ ಫಲಿತಾಂಶ ಉತ್ತಮ ಗೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಅಂತರರಾಷ್ಟ್ರೀಯ ಜಾನಪದ ಕಲಾವಿದ ಅಮ್ಮರಾಮಚಂದ್ರ, ನಿವೃತ್ತ ಪ್ರಾಧ್ಯಾಪಕ ಚಂದ್ರಗೌಡ, ವಕೀಲ ಎಂ.ಎನ್.ರವಿಶಂಕರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಹನುಮಂತರಾವ್ ಸಭೆಯನ್ನು ಕುರಿತು ಮಾತನಾಡಿದರು.

ಸಭೆಯಲ್ಲಿ ಸಿಡಿಸಿ ಅಧ್ಯಕ್ಷ ಎಸ್.ಎನ್.ಮೋಹನ್ ಕುಮಾರ್, ಪ್ರಾಂಶುಪಾಲ ಎಸ್.ಪಿ.ಪ್ರಕಾಶ್, ಉಪನ್ಯಾಸಕ ವಿರೂಪಾಕ್ಷ, ಸಿದ್ದರಾಜು, ಸಿದ್ದಾರ್ಥ, ಮೋಹನ್, ಮಾದೇವಿ, ಮಹೇಶ್, ಕೃಪಾ, ಮುಸ್ಕಾನ್, ತನುಜಾ, ಹರೀಶ್, ಸುಪ್ರಿಯಾ, ಜಾನ್ ಬಾಸ್ಕೋ, ಮನೋಜ್, ಸೌಜನ್ಯಾ, ನೀಲಮಣಿ, ಅನಿಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.