ADVERTISEMENT

ಸರಗೂರು: ಪ್ರಚಾರ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:11 IST
Last Updated 25 ಅಕ್ಟೋಬರ್ 2025, 5:11 IST
ಸರಗೂರು ಶಿವರಾತ್ರೀಶ್ವರ ಶಿವಾನುಭವ ಮಂಟಪದಲ್ಲಿ ಗುರುವಾರ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು ಪ್ರಚಾರ ಕಾರ್ಯಕ್ರಮದ ರಥಕ್ಕೆ ಹಂಚೀಪುರ ಮಠದ ಕಿರಿಯ ಸ್ವಾಮಿಜಿ ತೋಂಟದಾರ್ಯ ಸ್ವಾಮಿಜಿ ಚಾಲನೆ ನೀಡಿದರು
ಸರಗೂರು ಶಿವರಾತ್ರೀಶ್ವರ ಶಿವಾನುಭವ ಮಂಟಪದಲ್ಲಿ ಗುರುವಾರ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು ಪ್ರಚಾರ ಕಾರ್ಯಕ್ರಮದ ರಥಕ್ಕೆ ಹಂಚೀಪುರ ಮಠದ ಕಿರಿಯ ಸ್ವಾಮಿಜಿ ತೋಂಟದಾರ್ಯ ಸ್ವಾಮಿಜಿ ಚಾಲನೆ ನೀಡಿದರು   

ಸರಗೂರು: ಪಂಚದಾಸೋಹಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಿಟ್ಟಿದ್ದಟ ಸುತ್ತೂರು ಮಹಾಸಂಸ್ಥಾನ ಮಠದ  ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕೊಡುಗೆ  ವಿಶ್ವಕ್ಕೆ ಮಾದರಿ ಎಂದು ‘ಡಾ. ರಾಜೇಂದ್ರ ಮಹಾಸ್ವಾಮಿಗಳ ಭಕ್ತ ಬಳಗ’ದ ಗೌರವಾಧ್ಯಕ್ಷ  ದಡದಹಳ್ಳಿ ಡಿ. ಜಿ. ಶಿವರಾಜು ಹೇಳಿದರು.

ಪಟ್ಟಣದಲ್ಲಿ  ಗುರುವಾರ  ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಶತೋತ್ತರ ದಶಮಾನೋತ್ಸವ ಅ. 26 ರಂದು ನಡೆಯಲಿದ್ದು ,  ಪ್ರಚಾರ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ ಹಾಗೂ ದೀಕ್ಷಾ ಸಂಸ್ಕಾರ ಮತ್ತು ಪ್ರತಿಭಾ ಪುರಸ್ಕಾರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲ್ಲೂಕು ಘಟಕ, ಶ್ರೀರಾಜೇಂದ್ರ ಸ್ವಾಮೀಜಿ ಭಕ್ತ ಬಳಗ, ಜೆಎಸ್ ಎಎಸ್  ಶಿಕ್ಷಣ ಸಂಸ್ ಸಹಯೋಗದಲ್ಲಿ ಪಟ್ಟಣದ ಜೆಎಸ್‌ಎಸ್‌ಎಸ್ ಶಾಲಾ ಆವರಣದಲ್ಲಿ ನಡೆಯಲಿದೆ. ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

ADVERTISEMENT

ಹಂಚೀಪುರ ಮಠದ ಕಿರಿಯ ತೋಂಟದಾರ್ಯ ಸ್ವಾಮೀಜಿ ಮಾತನಾಡಿ ಸಮಾಜದ ಏಳ್ಗೆಗಾಗಿ ಸುತ್ತೂರು ಮಠದ ರಾಜೇಂದ್ರ ಶ್ರೀಗಳ ಕೂಡುಗೆ ವಿಶೇಷ ಎಂದರು.  ಭಕ್ತ ಬಳಗ ಅಧ್ಯಕ್ಷ ಮಹೇಶ್,   ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕಾಟವಾಳು ವೀರಭದ್ರಪ್ಪ, ಬಸವ ಬಳಗದ ಘಟಕದ ಅಧ್ಯಕ್ಷ ಹಂಚೀಪುರ ಗಣಪತಿ, ಬಕ್ತ ಬಳಗ ಪ್ರದಾನ ಕಾರ್ಯದರ್ಶಿ ಬಾಡಗ ಸಿದ್ದಪ್ಪ, ಅಕ್ಕನ ಬಳಗ ಘಟಕದ  ಅಧ್ಯಕ್ಷೆ ಸುನಂದರಾಜು, ಕಾರ್ಯದರ್ಶಿ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಗುರುಸ್ವಾಮಿ, ಮುಖಂಡರಾದ ಜಯಕುಮಾರ್, ಚಂದ್ರಶೇಖರ್, ನಿಜಗುಣ, ಜೆಎಸ್ಎಸ್ ಪ್ರಾಂಶುಪಾಲ ಮಹದೇವಸ್ವಾಮಿ, ಪ್ರವೀಣ್, ಕೃಷ್ಣಮೂರ್ತಿ, ಅಶೋಕ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.