ಹುಣಸೂರು: ವಿಜ್ಞಾನ ಮೇಳಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವುದರೊಂದಿಗೆ ಅವಿಷ್ಕಾರಗೊಳ್ಳುವ ಹೊಸ ಬಗೆಯ ವಿಜ್ಞಾನ ವಿಷಯ ಅರಿಯಲು ಪ್ರಮುಖ ವೇದಿಕೆ ಆಗಲಿದೆ ಎಂದು ಮಾಧವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮತ್ತು ವಿದ್ಯಾಭಾರತಿ ಸಂಸ್ಥೆಯ ರಾಜ್ಯ ಪ್ರಮುಖ್ ರಘುವೀರ್ ಹೇಳಿದರು.
ನಗರದ ಶಾಸ್ತ್ರಿ ಗ್ಲೋಬಲ್ ಸ್ಕೂಲ್ ನಲ್ಲಿ ಶನಿವಾರ ಜಿಲ್ಲಾ ಮಟ್ಟದ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರ ತರಲು ಶೈಕ್ಷಣಿಕ ಮೇಳಗಳು ಸಹಕಾರಿಯಾಗಲಿದೆ ಎಂದರು.
ಕ್ರೀಡೆ ಮತ್ತು ಪಠ್ಯ ಎರಡೂ ಒಂದೊಂದು ಅವಲಂಭಿತವಾಗಿದ್ದು, ವಿದ್ಯಾರ್ಥಿಗಳು ಕ್ರೀಡೆ ಮತ್ತು ಪಠ್ಯ ಎರಡೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜನಾಧಿಕಾರಿ ಪ್ರೊ.ಗುರುಮೂರ್ತಿ ಮಾತನಾಡಿದರು. ವಿಜ್ಞಾನ ಮೇಳದಲ್ಲಿ ಜಿಲ್ಲೆಯ 12 ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಮಾದರಿಯೊಂದಿಗೆ ಭಾಗವಹಿಸಿದ್ದರು. ಶಾಸ್ತ್ರಿ ಗ್ಲೋಬಲ್ ಸ್ಕೂಲ್ ಪಿಯುಸಿ ವಿಭಾಗದ ಪ್ರಾಂಶುಪಾಲ ಎಂ.ಎಲ್.ರವಿಶಂಕರ್, ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಎಸ್.ನಾಗರಾಜ್, ರೋಟರಿ ವಿದ್ಯಾಸಂಸ್ಥೆ ಮುಖ್ಯಶಿಕ್ಷಕಿ ದೀಪಾ, ಸಂಸ್ಥೆಯ ನಿರ್ದೇಶಕ ಸಚ್ಚಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.