ADVERTISEMENT

ಬಿಷಪ್‌ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 10:24 IST
Last Updated 30 ನವೆಂಬರ್ 2019, 10:24 IST

ಮೈಸೂರು: ಮೈಸೂರು ಧರ್ಮಕ್ಷೇತ್ರದ ಬಿಷಪ್ ಕೆ.ಎಂ.ವಿಲಿಯಂ ವಿರುದ್ಧ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಇಲ್ಲಿನ ಲಷ್ಕರ್ ಠಾಣೆಯಲ್ಲಿ ದಾಖಲಾಗಿದೆ.

‌ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಲೈಂಗಿಕ ಕಿರುಕುಳ), 363 (ಅಪಹರಣ) ಹಾಗೂ 506 (ಬೆದರಿಕೆ) ಅನ್ವಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸೋಸಿಯೇಷನ್‌ ಆಫ್‌ ಕನ್ಸರ್ನ್‌ಡ್‌ ಕ್ಯಾಥೊಲಿಕ್ಸ್‌ ಹೆಸರಿನ ಸಂಘಟನೆಯ ಸದಸ್ಯರಾದ ರಾಬಾರ್ಟ್ ರೊಸಾರಿಯೋ ಎಂಬುವವರು ನ. 5ರಂದು ಬಿಷಪ್ ವಿರುದ್ಧ ದೂರು ನೀಡಿದ್ದರು. ತನ್ನ ಬಳಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರಿಗೆ 2018ರ ಜನವರಿ 1ರಿಂದ ಜುಲೈ 27ರವರೆಗೆ ಬಿಷಪ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ಆರೋಪವನ್ನು ಬಿಷಪ್ ಅಲ್ಲಗಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT