ADVERTISEMENT

ಶಕುಂತಲಾ ಜಯದೇವ ಶರಣ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:32 IST
Last Updated 3 ಮಾರ್ಚ್ 2021, 2:32 IST
ಬಾಗಲಕೋಟೆಯ ಸಾಹಿತಿ ಹಾಗೂ ಪ್ರವಚನಕಾರರಾದ ಡಾ.ಈಶ್ವರ ಮಂಟೂರ ಮತ್ತು ಹಾವೇರಿಯ ನಿವೃತ್ತ ಶಿಕ್ಷಕಿ ಬಸಮ್ಮ ಹಳಕೊಪ್ಪ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ನೀಡುವ ‘ಶಕುಂತಲಾ ಜಯದೇವ ಶರಣ ಪ್ರಶಸ್ತಿ‌’ಯನ್ನು ಮೈಸೂರಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮಂಗಳವಾರ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶಾರದಾ ಶಿವಲಿಂಗಸ್ವಾಮಿ, ದತ್ತಿ ದಾಸೋಹಿ ಡಾ.ಶಕುಂತಲಾ ಜಯದೇವ, ಪರಿಷತ್ತಿನ ಗೌರವ ಸಲಹೆಗಾರ ಗೊ.ರು.ಚನ್ನಬಸಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್‌ ಹಂಚೆ, ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಚಂದ್ರಶೇಖರ ಇದ್ದಾರೆ.

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವ ‘ಶಕುಂತಲಾ ಜಯದೇವ ಶರಣ ಪ್ರಶಸ್ತಿ’ಯನ್ನು ಬಾಗಲಕೋಟೆಯ ಸಾಹಿತಿ ಹಾಗೂ ಪ್ರವಚನಕಾರ ಈಶ್ವರ ಮಂಟೂರ ಹಾಗೂ ಹಾವೇರಿಯ ನಿವೃತ್ತ ಶಿಕ್ಷಕಿ ಬಸಮ್ಮ ಹಳಕೊಪ್ಪ ಅವರಿಗೆ, ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮಂಗಳವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಅಭಿನಂದನಾ ನುಡಿಗಳನ್ನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್‌ ಹಂಚೆ, ‘ಪ್ರಶಸ್ತಿ ಸ್ವೀಕಾರದಿಂದ ಪ್ರಶಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಿದೆ’ ಎಂದು ತಿಳಿಸಿದರು.‌

ADVERTISEMENT

‘ಆರ್ಥಿಕ ಘಟಕಗಳಾಗಿ ಜನರನ್ನು ನಿಯಂತ್ರಿಸುತ್ತಿದ್ದ ನೆಲೆಯಲ್ಲಿ ವಚನಕಾರರು ದೇವಸ್ಥಾನಗಳನ್ನು ವಿರೋಧಿಸಿದರೇ ಹೊರತು ಸಾತ್ವಿಕ ನೆಲೆಯಲ್ಲಿ ಅಲ್ಲ. ದೇವರನ್ನು ಅವರು ನಿರಾಕರಿಸಲಿಲ್ಲ. ಮೂಢನಂಬಿಕೆಗಳನ್ನು, ಜಡ ಸಂಪ್ರದಾಯಗಳನ್ನು ವಿರೋಧಿಸಿದರು. ವಚನ ಸಾಹಿತ್ಯ ಕುರಿತ ನಮ್ಮ ನಿಲುವು ಯಾವಾಗಲೂ ವಿವೇಕಯುತವಾಗಿಯೇ ಇರಬೇಕು’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಈಶ್ವರ ಮಂಟೂರ, ‘ಇಂದು ಬುದ್ಧಿವಂತರಿಗಿಂತ ಹೃದಯವಂತರ ಅಗತ್ಯ ಇದೆ’ ಎಂದು ಹೇಳಿದರು.‌

‘ಪ್ರವಚನಕಾರರೊಬ್ಬರಿಗೆ ಹೃದಯಾಘಾತವಾದಾಗ ಪ್ರವಚನ ತಪ್ಪಿ ಹೋಗಬಾರದೆಂದು, ಕೇಳುಗನಾಗಿದ್ದ ನನಗೆ ಪ್ರವಚನ ಮಾಡುವ ಅವಕಾಶ ದೊರೆಯಿತು. ಇದೊಂದು ಆಕಸ್ಮಿಕ ಘಟನೆ’ ಎಂದು ತಾವು ಪ್ರವಚನ ಕ್ಷೇತ್ರಕ್ಕೆ ಕಾಲಿರಿಸಿದ ಸಂದರ್ಭವನ್ನು ನೆನಪು ಮಾಡಿಕೊಂಡರು.

ಬಸಮ್ಮ ಹಳಕೊಪ್ಪ ಮಾತನಾಡಿ, ಮಕ್ಕಳಿಗೆ ವಾರಕ್ಕೊಂದಾದರೂ ವಚನವನ್ನಾದರೂ ಹೇಳಿಕೊಡಬೇಕು. ಈ ಮೂಲಕ ಶರಣ ಧರ್ಮವನ್ನು ಉಳಿಸಬೇಕು ಎಂದು ಹೇಳಿದರು.

ಪರಿಷತ್ತಿನ ಗೌರವ ಸಲಹೆಗಾರ ಗೊ.ರು.ಚನ್ನಬಸಪ್ಪ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಜನಸಾಮಾನ್ಯರ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಎಂದು ಮೊದಲು ಆರೋಪಿಸಲಾಯಿತು. ಈಗ ಲಸಿಕೆ ಹಾಕಿಸಿಕೊಂಡರೆ, ಪತ್ರಿಕೆಗಳಲ್ಲಿ ಚಿತ್ರ ಪ್ರಕಟಿಸುವುದಕ್ಕೆ ಹಾಕಿಸಿಕೊಂಡರು ಎಂದು ಟೀಕಿಸುವಂತಹ ಸಮಾಜದಲ್ಲಿ ನಾವಿದ್ದೇವೆ. ನಿಜಕ್ಕೂ ಸಮಾಜ ನೈತಿಕವಾಗಿ ಕುಸಿದು ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, ‘ಶಕುಂತಲಾ ಅವರು ₹ 5 ಲಕ್ಷ ದತ್ತಿ ನಿಧಿ ಇಟ್ಟು ಪ್ರಶಸ್ತಿ ನೀಡುತ್ತಿದ್ದಾರೆ. ಈಗ ಮತ್ತೆ ₹ 5 ಲಕ್ಷ ನೀಡಲು ಮುಂದಾಗಿದ್ದಾರೆ. ಪ್ರಶಸ್ತಿ ಪ್ರದಾನ ಸೇರಿದಂತೆ ಯಾವುದೇ ಹಂತದಲ್ಲೂ ಅವರು ಹಸ್ತಕ್ಷೇಪ ಮಾಡುತ್ತಿಲ್ಲ. ಇಂತಹವರು ಅಪರೂಪ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.