ADVERTISEMENT

‘ಬಸವಣ್ಣ ತೋರಿದ ಹಾದಿಯಲ್ಲಿ ಸಾಗೋಣ’

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 6:27 IST
Last Updated 17 ಅಕ್ಟೋಬರ್ 2024, 6:27 IST
ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಶೇಷಾದ್ರಪುರಂ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಉದ್ಘಾಟಿಸಿದರು
ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಶೇಷಾದ್ರಪುರಂ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಉದ್ಘಾಟಿಸಿದರು   

ಮೈಸೂರು: ‘ಬಸವಣ್ಣ ಮತ್ತು ಶರಣರು ತೋರಿದ ಬೆಳಕಿನ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು’ ಎಂದು ಲೇಖಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಸಹಯೋಗದಲ್ಲಿ ಹೆಬ್ಬಾಳದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಅಲ್ಲಿನ ಬಸವ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಸೃಷ್ಟಿಯ ಸಂಗಮ. ಮುಖವಾಡ ಹಾಗೂ ನಕಾರಾತ್ಮಕವಾದುದನ್ನು ಕಳೆದುಕೊಳ್ಳಬೇಕು. ಭಕ್ತಿ ಮತ್ತು ಪ್ರೀತಿ ಸುಲಭವಾಗಿ ದೊರೆಯುವುದಿಲ್ಲ. ಇದಕ್ಕೆ ತುಂಬಾ ಕಷ್ಟ ಪಡಬೇಕು’ ಎಂದರು.

ADVERTISEMENT

ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಮಾತನಾಡಿದರು.

ಕನ್ನಡ ಪರೀಕ್ಷೆಯಲ್ಲಿ 100 ಅಂಕ ಪಡೆದ ರಚಿತಾ ಅವರನ್ನು ಗೌರವಿಸಲಾಯಿತು.

ಪ್ರಾಂಶುಪಾಲೆ ಸೌಮ್ಯಾ ಕೆ.ಈರಪ್ಪ, ಬಸವ ಅಧ್ಯಯನ ಕೇಂದ್ರದ ಸಂಯೋಜಕಿ, ಕನ್ನಡ ವಿಭಾಗದ ಮುಖ್ಯಸ್ಥೆ ಲಾವಣ್ಯಾ ಸಿ.ಪಿ., ದತ್ತಿ ನೀಡಿದ ಆರ್.ಎಸ್. ಪೂರ್ಣಾನಂದ, ಕೆ.ಎಸ್. ಮೋಹನ್‌ಕುಮಾರ್‌, ಪರಿಷತ್ತಿನ ಕಾರ್ಯದರ್ಶಿ ಟಿ.ಎಸ್. ಕುಮಾರಸ್ವಾಮಿ, ಮಲ್ಲಿಕಾರ್ಜುನ ಮೊರಬದ, ಮಂಜುಳಾ, ರಶ್ಮಿ, ನಂದೀಶ್, ಚಿನ್ನಪ್ಪ, ಜಗನ್ನಾಥ್, ಪೂರ್ಣಾನಂದ, ಚನ್ನಬಸಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.