ADVERTISEMENT

ಹುಣಸೂರು | ಶಾಸ್ತ್ರಿ ಪಿಯು ಕಾಲೇಜು ಚಾಂಪಿಯನ್‌

ದಕ್ಷಿಣ ಭಾರತ ವಿದ್ಯಾ ಭಾರತಿ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:43 IST
Last Updated 10 ಅಕ್ಟೋಬರ್ 2025, 4:43 IST
ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹುಣಸೂರು ನಗರದ ಶಾಸ್ತ್ರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಚಾಂಪಿಯನ್‌ ಶಿಪ್‌ ತಮ್ಮದಾಗಿಸಿಕೊಂಡರು
ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹುಣಸೂರು ನಗರದ ಶಾಸ್ತ್ರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಚಾಂಪಿಯನ್‌ ಶಿಪ್‌ ತಮ್ಮದಾಗಿಸಿಕೊಂಡರು   

ಹುಣಸೂರು: ‘ದಕ್ಷಿಣ ಭಾರತ ವಿದ್ಯಾಭಾರತ ಅಥ್ಲೆಟಿಕ್ಸ್‌ನಲ್ಲಿ ಹುಣಸೂರು ತಾಲ್ಲೂಕಿನ ಶಾಸ್ತ್ರಿ ಸಂಯುಕ್ತ ಪದವಿಪೂರ್ವ ಕಾಲೇಜು ಕೂಟದ ಚಾಂಪಿಯನ್‌ ಶಿಪ್‌ ಪಡೆದು ಸಾಧನೆ ಮೈಲುಗಲ್ಲು ಸಾಧಿಸಿದೆ’ ಎಂದು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಎಲ್.ರವಿಶಂಕರ್‌ ತಿಳಿಸಿದ್ದಾರೆ.

‘ಬೆಂಗಳೂರಿನಲ್ಲಿ ನಡೆದ ದಕ್ಷಿಣ ವಲಯ ವಿದ್ಯಾಭಾರತಿ ಅಥ್ಲೆಟಿಕ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದಿದ್ದ ಶಾಸ್ತ್ರಿ ಪದವಿಪೂರ್ವ ಕಾಲೇಜು ಕ್ರೀಡಾಪಟುಗಳು ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಚಾಂಪಿಯನ್‌ ಶಿಪ್‌ ತಮ್ಮದಾಗಿಸಿಕೊಂಡಿದ್ದಾರೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ ವಿವರ: ಬಾಲಕಿಯರ ವಿಭಾಗ: 100 ಮೀಟರ್ ಮತ್ತು 400 ಮೀ ಓಟ - ಅನುಶ್ರೀ (ಪ್ರಥಮ), 1500 ಮೀ ಓಟ- ಅಮೃತಾ (ಪ್ರಥಮ), ಅಂಕಿತಾ (ದ್ವಿತೀಯ), 3000 ಮೀಟರ್ ಓಟ- ಅಮೃತಾ (ಪ್ರಥಮ), ಅಂಕಿತಾ (ದ್ವಿತಿಯಾ), ಲಾಂಗ್‌ ಜಂಪ್‌ - ಭುವನೇಶ್ವರಿ (ಪ್ರಥಮ), ಅನುಶ್ರೀ (ದ್ವಿತಿಯ), ಟ್ರಿಪಲ್‌ ಜಂಪ್‌ - ಭುವನೇಶ್ವರಿ (ಪ್ರಥಮ), ರೇಸ್‌ ವಾಕ್‌ - ಯಶೋಧಾ (ಪ್ರಥಮ), ಶಾಟ್‌ ಪಟ್-‌ ಅಂಕಿತಾ (ಪ್ರಥಮ), 4X400 ರಿಲೇ – ಅಮೃತಾ, ಅಂಕಿತಾ, ವಂದನಾ, ಸಿಂಚನಾ (ಪ್ರಥಮ), 4X100 ರಿಲೇ – ಅನುಶ್ರೀ, ಯಶೋಧಾ, ಬುವನೇಶ್ವರಿ, ಸಾನಿಕಾ (ಪ್ರಥಮ). 4 ಕಿ.ಮಿ. ಕ್ರಾಸ್‌ ಕಂಟ್ರಿ- ಭವಿಕಾ, ಜಶ್ಮಿತಾ,ವರ್ಷಿತಾ, ಲಕ್ಷ್ಮಿ, ಅಂಕಿತಾ, ಸ್ನಿಗ್ಧಾ (ಪ್ರಥಮ).

ADVERTISEMENT

ಬಾಲಕರ ವಿಭಾಗ:

400 ಮೀಟರ್ ಓಟ: ಅಭಿಷೇಕ್‌ (ದ್ವಿತಿಯ), 800 ಮೀಟರ್ ಓಟ- ಅಭಿಷೇಕ್‌ (ಪ್ರಥಮ), ಟ್ರಿಪಲ್‌ ಜಂಪ್‌ - ರಾಘವೇಂದ್ರ (ಪ್ರಥಮ), ಅಭಿಷೇಕ್‌ (ದ್ವಿತೀಯ), ಲಾಂಗ್‌ ಜಂಪ್‌ -ರಾಘವೇಂದ್ರ (ಪ್ರಥಮ), ರೇಸ್‌ ವಾಕ್-‌ ಗೌತಮ್‌ (ದ್ವಿತಿಯ), 4X100 ಮಿಟರ್ ರಿಲೇ-ಬಸಂತ್‌, ಜಶ್ವಂತ್‌, ಮೇಘಶ್ಯಾಮ್‌, ರಾಘವೇಂದ್ರ (ಪ್ರಥಮ), 4X400 ಮೀಟರ್ ರಿಲೇ- ಅಭಿಷೇಕ್‌, ಗೌತಮ್‌, ಚಿನ್ಮಯ್‌, ತ್ರೌನ್ (ಪ್ರಥಮ), 6 ಕಿ.ಮೀ. ಕ್ರಾಸ್‌ ಕಂಟ್ರಿ- ಚೇತನ್‌, ಸಚಿನ್‌, ಯುವರಾಜ್‌, ಪ್ರೀತಮ್‌, ಧೀರಜ್‌, ಶಶಿಕುಮಾರ್‌ (ಪ್ರಥಮ) ಸ್ಥಾನ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.