ADVERTISEMENT

ಮೇಯರ್‌ ಶಿವಕುಮಾರ್‌ಗೆ ಮಾತೃವಿಯೋಗ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 6:23 IST
Last Updated 13 ನವೆಂಬರ್ 2022, 6:23 IST
ಸಿದ್ದಮ್ಮ
ಸಿದ್ದಮ್ಮ   

ಮೈಸೂರು: ಪಾಲಿಕೆ ಮೇಯರ್‌ ಶಿವಕುಮಾರ್‌ ಅವರ ತಾಯಿ ಸಿದ್ದಮ್ಮ (96) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.‌

ಸಿದ್ದಮ್ಮ ಅವರಿಗೆ ಶಿವಕುಮಾರ್ ಸೇರಿದಂತೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.

ಕುವೆಂಪುನಗರದ ಸಂಪಿಗೆ ರಸ್ತೆಯ 2ನೇ ಅಡ್ಡರಸ್ತೆಯ ನಿವಾಸಿಯಾಗಿದ್ದ ಅವರು, ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 15 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ADVERTISEMENT

ಚಾಮುಂಡಿಬೆಟ್ಟದ ತಪ‍್ಪಲಿನಲ್ಲಿರುವ ಸ್ಮಶಾನದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.