
ಮೈಸೂರು: 'ಸಿದ್ದರಾಮಯ್ಯ ಇಲ್ಲದಿರುವ ಕಾಂಗ್ರೆಸ್ ಹಾಗು ಸರ್ಕಾರವನ್ನು ಊಹಿಸುವುದೂ ಕಷ್ಟ. 2028ರವರೆಗೂ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ' ಎಂದು ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಇಲ್ಲಿನ ಸೆನೆಟ್ ಭವನದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
'ಯಾವಾಗಲು ಯೋಗ್ಯರ ಕೈಯಲ್ಲಿ ಅಧಿಕಾರ ಇರಬೇಕು. ಜೈಕಾರ ಕೂಗುವವರು ನನ್ನ, ಪರಮೇಶ್ವರ್ ಪರ ಘೋಷಣೆ ಕೂಗಬಹುದು. ಆದರೆ ಇರುವುದೊಂದೇ ಮುಖ್ಯಮಂತ್ರಿ ಹುದ್ದೆ. 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿ ಪೂರೈಸಲೇ ಬೇಕು. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿದರೆ ಅಹಿಂದ ಸಮುದಾಯವೇ ಮುಳುಗಲಿದೆ' ಎಂದು ಎಚ್ಚರಿಸಿದರು.
'ಈಚೆಗಷ್ಟೇ ಮತ್ತೆ ಮುಖ್ಯಮಂತ್ರಿ ಎಂಬ ನಾಟಕ ನೋಡಿದೆ. ರಾಜಕೀಯ ಗುಂಪುಗಾರಿಕೆಯನ್ನು ಚೆನ್ನಾಗಿ ಬಿಂಬಿಸುತ್ತದೆ. ಈ ನಾಟಕ ನೋಡಿದ ಮೇಲೆ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕೋ ಗೊತ್ತಿಲ್ಲ. ಸಿದ್ದರಾಮಯ್ಯರಿಗೂ ನಾಟಕ ನೋಡುವಂತೆ ಸಲಹೆ ನೀಡಿದ್ದೇನೆ' ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.