ಸಿದ್ದರಾಮಯ್ಯ , ಮುಖ್ಯಮಂತ್ರಿ
ಮೈಸೂರು: ‘ಡಿ.ದೇವರಾಜ ಅರಸು ಅವರು ಸತತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದು ದಾಖಲೆ ನಿರ್ಮಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಐದು ವರ್ಷದ ನಂತರ 2ನೇ ಬಾರಿಗೆ ಮುಖ್ಯಮಂತ್ರಿ ಆದವರು. ಹೀಗಾಗಿ, ದಾಖಲೆ ಮುರಿದಿದ್ದಾರೆ ಎಂದು ಹೇಳುವುದು ಸೂಕ್ತವಾದುದಲ್ಲ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎಂ.ಎ. ಮೋಹನ್ ಹೇಳಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಸು ಮೈಸೂರು ರಾಜ್ಯ ಎಂದು ಇದ್ದಿದ್ದನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಉಳುವವನೇ ಭೂಮಿಯ ಒಡೆಯ ಎಂದು ಮಾಡಿ, ಕೃಷಿ ಜಮೀನು ಇಲ್ಲದವರಿಗೆ ದೊರೆಯುವಂತೆ ಮಾಡಿದರು. ಕಳಂಕವೇ ಇಲ್ಲದಂತೆ ರಾಜಕಾರಣ ನಡೆಸಿದ್ದರು. ಸಿದ್ದರಾಮಯ್ಯ ಅವರು ಏನು ಮಾಡಿದ್ದಾರೆ?’ ಎಂದು ಕೇಳಿದರು.
‘ಕ್ರೀಡಾ ದಾಖಲೆಗಳಿಗೂ– ರಾಜಕೀಯ ದಾಖಲೆಗಳಿಗೂ ಹೋಲಿಕೆ ಸಲ್ಲದು’ ಎಂದರು.
‘ಮೈಸೂರಿಗೆ ಸಂಸದರ ಕೊಡುಗೆ ಶೂನ್ಯ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಆರೋಪಿಸಿರುವುದು ಖಂಡನೀಯ’ ಎಂದರು.
ನಗರ ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್, ರುದ್ರಮೂರ್ತಿ, ನಗರದ ಮಾಧ್ಯಮ ಸಂಚಾಲಕರಾದ ಮಹೇಶ್‌ರಾಜೇ ಅರಸ್, ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಬಿ.ಎಂ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.