
ತಿ.ನರಸೀಪುರ: ಜೆಡಿಎಸ್ ಪಕ್ಷದ ರಜತ ಮಹೋತ್ಸವದ ಅಂಗವಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಹೆಸರಿನಲ್ಲಿ ಶನಿವಾರ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ರಾಜ್ಯದಲ್ಲಿ ಕಳೆದ 25 ವರ್ಷದಲ್ಲಿ ಜೆಡಿಎಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಸಾಧನೆ ಮಾಡಿ ಆಡಳಿತ ನಡೆಸಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷವು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪುಟಿದೇಳುವ ಮೂಲಕ ಕ್ಷೇತ್ರವನ್ನು ತನ್ನತೆಕ್ಕೆಗೆ ತೆಗೆದುಕೊಳ್ಳಲಿದೆ. ಕಳೆದ ಬಾರಿ ಎಂ. ಅಶ್ವಿನ್ ಕುಮಾರ್ ಅವರನ್ನು ಗೆಲ್ಲಿಸಿ ಜನರು ಜೆಡಿಎಸ್ ಪಕ್ಷ ಹಾಗೂ ಉತ್ತಮ ವ್ಯಕ್ತಿತ್ವದ ಅಶ್ವಿನ್ ಅವರನ್ನು ಆಶೀರ್ವದಿಸಿದ್ದರು. ಈ ಬಾರಿ ಅನಿವಾರ್ಯವಾಗಿ ಪರಿಸ್ಥಿತಿಗಳಿಂದ ಸೋಲಾಗಿತ್ತು. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರ ಪಡೆ ಇದ್ದು, ಪಕ್ಷದ ಸಂಘಟನೆಗೆ ಕಾರ್ಯಕರ್ತರು ಒತ್ತು ನೀಡುತ್ತಿದ್ದಾರೆ. ಮುಂದೆ ಸೂಕ್ತ ಕಾರ್ಯ ಯೋಜನೆಗಳಿಂದ ಅಶ್ವಿನ್ ಕುಮಾರ್ ಮತ್ತೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಮ್ಮಿಗೆ ಹೊನ್ನನಾಯಕ ಮಾತನಾಡಿದರು.
ಇದಕ್ಕೂ ಮೊದಲು ಪಕ್ಷ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿ ಮುಂದೆ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳ ಸಮಕ್ಷಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಇದೇ ವೇಳೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಪಕ್ಷದ ಬೆಳ್ಳಿ ಹಬ್ಬವನ್ನು ಆಚರಿಸಲಾಯಿತು.
ಜಿ.ಪಂ.ಮಾಜಿ ಸದಸ್ಯ ಜಯಪಾಲ್ ಭರಣಿ, ಪಿ.ಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್.ಲಿಂಗಪ್ಪಾಜಿ, ದೊಡ್ಡೇ ಬಾಗಿಲು ಪಿಎಸಿಎಸ್ ಅಧ್ಯಕ್ಷ ಕೃಷ್ಣಾಪುರ ಮರಿಸ್ವಾಮಿ, ಯುವ ಮುಖಂಡ ಮೂಗೂರು ಶಿವಮೂರ್ತಿ, ಎಂ.ಕೆ.ಸಿದ್ದರಾಜು, ಮಾವಿನಹಳ್ಳಿ ರಾಜೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಶಂಭುದೇವನಪುರ ಎಂ.ರಮೇಶ್, ಸೋಸಲೆ ರಾಜಣ್ಣ, ಬಡ್ಡು ಶಿವಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಕನ್ನಹಳ್ಳಿ ಮಹದೇವ್, ಜಯರಾಮು, ಮೂಗೂರು ಎಂ.ಆರ್ ಶಿವಮೂರ್ತಿ, ರಾಜಶೇಖರ್, ಕುಕ್ಕೂರು ಉಮಾಪತಿ, ಕನ್ನಹಳ್ಳಿ ಚಿನ್ನಸ್ವಾಮಿ, ಡಿ. ಮಹದೇವ, ಕೆಬ್ಬೇಹುಂಡಿ ಮಹದೇವಸ್ವಾಮಿ, ಜನ ಕಲ್ಯಾಣ ಟ್ರಸ್ಟ್ ಮಾಜಿ ಅಧ್ಯಕ್ಷ ,ಕೃಷ್ಣಾಪುರ ರಾಮ ಶೆಟ್ಟಿ, ಮೂಗೂರು ರೇವಣ್ಣ,ಹಿರಿಯೂರು ಸೋಮಣ್ಣ.ಸೋಮನಾಥಪುರ ಗಣೇಶ್, ತಲಕಾಡು ನಾಗರಾಜ ಮೂರ್ತಿ ಹಾಜರಿದ್ದರು.
ಬನ್ನೂರಿನಲ್ಲೂ ಜೆಡಿಎಸ್ ಸಂಭ್ರಮ: ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಾಲೂಕಿನ ಬನ್ನೂರು ಪಟ್ಟಣದ ಸಂತೇ ಮಾಳದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಪಕ್ಷದ ರಾಜ್ಯ ಕಾರ್ಯದರ್ಶಿ ಬನ್ನೂರು ವೈ.ಎನ್.ರಾಮಸ್ವಾಮಿ ಮಾತನಾಡಿ, ಪಕ್ಷದ ಸ್ಥಾಪಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರ ಪರಿಶ್ರಮ ಹಾಗೂ ಮಾರ್ಗದರ್ಶನದಿಂದ ಜೆಡಿಎಸ್ ಪ್ರಾದೇಶಿಕ ಪಕ್ಷ 25 ವರ್ಷ ಪೂರೈಸಿದೆ ಎಂದು ಹೇಳಿದರು.
ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಬರಲಿದ್ದು ಕಾರ್ಯಕರ್ತರು ಈಗಿನಿಂದಲೇ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಅಶ್ವಿನ್ ಕುಮಾರ್ ಅವರನ್ನು ಗೆಲ್ಲಿಸಲು ಕಾತುರರಾಗಿದ್ದಾರೆ. ಹಾಗಾಗಿ 2028ರಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.
ರಜತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮುಖಂಡರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಕೊಡಗಹಳ್ಳಿ ಚಿಕ್ಕ ಜವರಪ್ಪ, ಬನ್ನೂರು ಹೋಬಳಿ ಅಧ್ಯಕ್ಷ ಕೆ.ಕುಮಾರಸ್ವಾಮಿ, ಅತ್ತಹಳ್ಳಿ ರವಿ, ಬಸವನಹಳ್ಳಿ ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್ ಕೃಷ್ಣೇಗೌಡ, ಸತೀಶ್, ಬಿ.ಎಲ್. ವೆಂಕಟೇಗೌಡ, ತುರುಗನೂರು ಮಂಜುನಾಥ್, ಕುಂತನಹಳ್ಳಿ ಚೆಲುವರಾಜು, ಮೇಗಳಕೊಪ್ಪಲು ಜಯರಾಮ್,ಬೀಡನಹಳ್ಳಿ ದೇವರಾಜು,ಬಾಣಗೋಡಿ ನಾರಾಯಣಸ್ವಾಮಿ, ದೇವರಾಜ್, ಹೆಗ್ಗೂರು ದೀಪು, ಅತ್ತಹಳ್ಳಿ ರವಿ,ಹನುಮನಾಳು ಮಾದೇಗೌಡ, ಪಿ- ಕಾರ್ಡ್ ಬ್ಯಾಂಕ್ ನಿರ್ದೇಶಕ ಮಧು ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.