ADVERTISEMENT

ಮಗುವಿಗೆ ಜನ್ಮ ನೀಡಿದ ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:14 IST
Last Updated 14 ಜೂನ್ 2021, 17:14 IST
ಚಿಕಿತ್ಸೆಯಲ್ಲಿ ಭಾಗಿಯಾದ ಅರವಳಿಕೆ ತಜ್ಞರಾದ ಡಾ.ಅಂದಿತಾ ಮುಖರ್ಜಿ, ಕಸಿ ಶಸ್ತ್ರಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್‌ ರಾಘವಯ್ಯ,  ಸ್ತ್ರೀ ರೋಗ ತಜ್ಞ ಡಾ.ಬಿ.ಪಿ.ಅಂಜಲಿ ಇದ್ದಾರೆ
ಚಿಕಿತ್ಸೆಯಲ್ಲಿ ಭಾಗಿಯಾದ ಅರವಳಿಕೆ ತಜ್ಞರಾದ ಡಾ.ಅಂದಿತಾ ಮುಖರ್ಜಿ, ಕಸಿ ಶಸ್ತ್ರಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್‌ ರಾಘವಯ್ಯ,  ಸ್ತ್ರೀ ರೋಗ ತಜ್ಞ ಡಾ.ಬಿ.ಪಿ.ಅಂಜಲಿ ಇದ್ದಾರೆ   

ಮೈಸೂರು: ಕಳೆದ 3 ವರ್ಷಗಳ ಹಿಂದೆ ಮೂತ್ರಪಿಂಡ ಮತ್ತು ಮೇದೋಜಿರಕ ಅಂಗಗಳ ಕಸಿಗೆ ಒಳಗಾಗಿದ್ದ 35 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಇಲ್ಲಿನ ಅಪೊಲೊ ಬಿಜಿಎಸ್‌ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ದೇಶದಲ್ಲೇ ಈ ಬಗೆಯ ಮೊದಲ ಪ್ರಕರಣ ಇದಾಗಿದೆ.

ಬಾಲ್ಯದಿಂದಲೇ ಮಧುಮೇಹಕ್ಕೆ ಒಳಗಾಗಿದ್ದ ಇವರು, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ)ಯಿಂದ ಬಳಲುತ್ತಿದ್ದರು. ಅಂಗಾಂಗ ವೈಫಲ್ಯದಿಂತ ಬಳಲುತ್ತಿದ್ದ ಇವರಿಗೆ 3 ವರ್ಷದ ಹಿಂದೆ ಏಕಕಾಲಕ್ಕೆ ಮೇದೋಜಿರಕ ಹಾಗೂ ಮೂತ್ರಪಿಂಡಗಳನ್ನು ಕಸಿ (ಎಸ್‌ಪಿಕೆಟಿ) ಮಾಡಲಾಗಿತ್ತು. ಇದೀಗ ಇವರ ಮಗುವಿಗೆ ‘ಬೆಳಕು’ ಎಂದು ಹೆಸರಿಡಲಾಗಿದೆ. ಅಂಗಾಂಗ ವೈಫಲ್ಯದಿಂದ ಬಳಲುವವರಿಗೆ ಈ ಪ್ರಕರಣ ಭರವಸೆ ತರುತ್ತದೆ.

ಕಸಿ ಶಸ್ತ್ರಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್‌ ರಾಘವಯ್ಯ, ಸ್ತ್ರೀ ರೋಗ ತಜ್ಞರಾದ ಡಾ.ಬಿ.ಪಿ.ಅಂಜಲಿ, ಅರವಳಿಕೆ ತಜ್ಞರಾದ ಡಾ.ಅಂದಿತಾ ಮುಖರ್ಜಿ ಈ ಚಿಕಿತ್ಸಾ ತಂಡದಲ್ಲಿದ್ದರು ಎಂದು ಆಪೊಲೊ ಬಿಜಿಎಸ್ ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.