ADVERTISEMENT

ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ: ಅಮೆಜಾನ್ ಶ್ರುತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:36 IST
Last Updated 28 ಫೆಬ್ರುವರಿ 2026, 7:36 IST
ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಚಾಮುಂಡಿ ವಲಯ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್.ಶ್ರುತಿ ಮಾತನಾಡಿದರು
ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಚಾಮುಂಡಿ ವಲಯ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್.ಶ್ರುತಿ ಮಾತನಾಡಿದರು   

ಮೈಸೂರು: ‘ಕ್ರೀಡೆಗಳು ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ’ ಎಂದು ಬೆಂಗಳೂರು ಅಮೆಜಾನ್ ಕಂಪನಿಯ ಸಪೋರ್ಟ್ ಆಪರೇಷನ್ ಸ್ಪೆಷಲಿಸ್ಟ್ ಎಸ್.ಶ್ರುತಿ ಹೇಳಿದರು.

ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಚಾಮುಂಡಿ ವಲಯ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡೆಗಳು ಬಲವಾದ ವ್ಯಕ್ತಿತ್ವ ಮತ್ತು ವೃತ್ತಿಜೀವನ ನಿರ್ಮಿಸಲು ಸಹಾಯ ಮಾಡುತ್ತವೆ. ಜೀವನದಲ್ಲಿ ಶಿಸ್ತನ್ನು ಬೆಳೆಸುವಲ್ಲಿ ಮತ್ತು ಸಕ್ರಿಯವಾಗಿರಲು ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ’ ಎಂದರು.

ADVERTISEMENT

ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಚ್.ಎನ್‌.ಭಾಸ್ಕರ್ ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಮಾತ್ರ ಮಯಖ್ಯವಲ್ಲ. ಭಾಗವಹಿಸುವಿಕೆ ನಿಜವಾದ ಗೆಲುವು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರೇಚಣ್ಣ ಮಾತನಾಡಿ, ಕೃತಕ ಬುದ್ಧಿಮತ್ತೆ ಯಾವುದೇ ಕ್ಷೇತ್ರವನ್ನು ಬದಲಾಯಿಸಬಹುದು. ಆದರೆ ಕ್ರೀಡೆಯನ್ನಲ್ಲ. ಕ್ರೀಡೆ ಏಕತೆಯ ಭಾವನೆ ಬೆಳೆಸಲು ಸಹಾಯ ಮಾಡುತ್ತದೆ ಎಂದರು.

ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ರಶ್ಮಿ ಇದ್ದರು.

ಕ್ರೀಡಾಕೂಟದಲ್ಲಿ ಮಹಿಳಾ ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ ಮತ್ತು ಟೆನ್ನಿಕಾಯ್ಟ್, ವಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್ ಪಂದ್ಯ ನಡೆಸಲಾಯಿತು. ಚಾಮುಂಡಿ ವಲಯದ 18 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

ಕ್ರೀಡಾಕೂಟದ ಸ್ಪರ್ಧೆಗಳ ವಿಜೇತರು ಥ್ರೋಬಾಲ್: ಜೆಎಸ್‌ಎಸ್ ಮಹಿಳಾ ಕಾಲೇಜು (ಪ್ರಥಮ) ಜೆಎಸ್‌ಎಸ್ ಕಾಲೇಜು (ದ್ವಿತೀಯ) ಪಿಜಿಎಸ್‌ಸಿ ಮಾನಸ ಗಂಗೋತ್ರಿ (ತೃತೀಯ). ಬಾಲ್ ಬ್ಯಾಡ್ಮಿಂಟನ್: ಪಿಜಿಎಸ್‌ಸಿ ಮಾನಸ ಗಂಗೋತ್ರಿ (ಪ್ರಥಮ) ಜೆಎಸ್‌ಎಸ್ ಮಹಿಳಾ ಕಾಲೇಜು (ದ್ವಿತೀಯ) ಮಹಾರಾಣಿ ಮಹಿಳಾ ಕಲಾ ಕಾಲೇಜು (ತೃತೀಯ). ಕಬಡ್ಡಿ: ಜೆಎಸ್‌ಎಸ್ ಮಹಿಳಾ ಕಾಲೇಜು (ಪ್ರಥಮ) ಮಹಾರಾಣಿ ಮಹಿಳಾ ಕಲಾ ಕಾಲೇಜು (ದ್ವಿತೀಯ) ಪಿಜಿಎಸ್‌ಸಿ ಮಾನಸ ಗಂಗೋತ್ರಿ (ತೃತೀಯ). ಟೆನ್ನಿಕಾಯ್ಟ್: ಜೆಎಸ್‌ಎಸ್ ಕಾಲೇಜು (ಪ್ರಥಮ) ಜೆಎಸ್‌ಎಸ್ ಮಹಿಳಾ ಕಾಲೇಜು (ದ್ವಿತೀಯ) ಪಿಜಿಎಸ್‌ಸಿ ಮಾನಸ ಗಂಗೋತ್ರಿ (ತೃತೀಯ). ವಾಲಿಬಾಲ್: ಪಿಜಿಎಸ್‌ಸಿ ಮಾನಸ ಗಂಗೋತ್ರಿ (ಪ್ರಥಮ) ಜೆಎಸ್‌ಎಸ್ ಮಹಿಳಾ ಕಾಲೇಜು (ದ್ವಿತೀಯ) ಕ್ರೈಸ್ಟ್ ಕಾಲೇಜು (ತೃತೀಯ). ಶೆಟ್ಟಲ್ ಬ್ಯಾಡ್ಮಿಂಟನ್: ಜೆಎಸ್‌ಎಸ್ ಮಹಿಳಾ ಕಾಲೇಜು (ಮೈಸೂರು) ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ದ್ವಿತೀಯ) ಕ್ರೈಸ್ಟ್ ಕಾಲೇಜು (ತೃತೀಯ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.