
ಪ್ರಜಾವಾಣಿ ವಾರ್ತೆ
ಪಿರಿಯಾಪಟ್ಟಣ: ಪಟ್ಟಣದ ಗೋಣಿಕೊಪ್ಪ ರಸ್ತೆಯ ನಿವಾಸಿ ಪ್ರಣವ್ ಪಿ. ರೂಬಿಕ್ ಕ್ಯೂಬ್ ನಲ್ಲಿ ರಾಮನ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾನೆ. 498 ಕ್ಯೂಬ್ ಬಳಸಿ ಚಿತ್ರ ಬಿಡಿಸಿದ್ದು ಆಕರ್ಷನೀಯವಾಗಿದೆ.
ಪುಷ್ಪ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಈತ ರೂಬಿಕ್ ಕ್ಯೂಬ್ ಸಾಲ್ವ್ ಮಾಡುವುದರಲ್ಲಿ ಪರಿಣಿತ. 22 ವಿವಿಧ ರೀತಿ ಕ್ಯೂಬ್ ಸಾಲ್ವ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಬುಕ್ ಆಫ್ ರೆಕಾರ್ಡ್ ಮಾಡಿದ್ದಾನೆ. ಈ ಹಿಂದೆ ಶ್ರೀಕೃಷ್ಣ, ವಿರಾಟ್ ಕೊಯ್ಲಿ, ರಾಹುಲ್ ದ್ರಾವಿಡ್, ಶಿವಕುಮಾರ ಸ್ವಾಮೀಜಿ, ಮೋದಿ ಅವರ ಚಿತ್ರಗಳನ್ನುರೂಬಿಕ್ ಕ್ಯೂಬ್ ನಲ್ಲಿ ರಚಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.