
ಮೈಸೂರು: ಇಲ್ಲಿನ ಭಾರತೀಯ ಶೈಕ್ಷಣಿಕ ನಾಟಕ ಸಂಸ್ಥೆ (ಐಐಇಟಿ)ಯಿಂದ ‘ಸೃಜನಾತ್ಮಕ ಬೆಸುಗೆ: ಸಂಗೀತ, ನಾಟಕ, ವಿಜ್ಞಾನ’ ಎಂಬ ಅಂತರಶಾಸ್ತ್ರೀಯ ಕಾರ್ಯಕ್ರಮವನ್ನು ಜ.24ರಿಂದ 26ರವರೆಗೆ ಜೆಎಲ್‌ಬಿ ರಸ್ತೆಯ ಹಾರ್ಡ್ವಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
24ರಂದು ಸಂಜೆ 6ಕ್ಕೆ ನಾಟಕಕಾರ ಎಂ.ಕೆ. ಶಂಕರ್ ‘ವಿಜ್ಞಾನ ಮತ್ತು ಸಂಗೀತದ ಮೇಳ’ ಕುರಿತು ಸಂವಾದ ನಡೆಸುವರು. ಸಂಗೀತ ಮತ್ತು ವಿಜ್ಞಾನಗಳ ಆಂತರಿಕ ಸಂಬಂಧ, ಧ್ವನಿ ಮತ್ತು ರಚನೆಯ ತತ್ವಗಳನ್ನು ಪ್ರಸ್ತುತಪಡಿಸಲಾಗುವುದು.
25ರಂದು ಸಂಜೆ 4ಕ್ಕೆ ಮಕ್ಕಳ ಮನೋವೈದ್ಯ ಡಾ.ಶೇಖರ್ ಶೇಷಾದ್ರಿ ‘ರೂಪಕ ಮತ್ತು ತಂತ್ರವಾಗಿ ಪ್ರದರ್ಶನ’ ಕುರಿತು ಉಪನ್ಯಾಸ ನೀಡುವರು. ಮಾನವನ ನಡವಳಿಕೆ, ಕಲಿಕೆ ಹಾಗೂ ಭಾವನಾತ್ಮಕ ಬೆಳವಣಿಗೆ ಅರ್ಥ ಮಾಡಿಕೊಳ್ಳಲು ಪ್ರದರ್ಶನಕಲೆ ಹೇಗೆ ಒಂದು ಪರಿಣಾಮಕಾರಿ ಸಾಧನವಾಗುತ್ತದೆ ಎಂಬುದನ್ನು ವಿಶ್ಲೇಷಿಸಲಾಗುವುದು.
26ರಂದು ಸಂಜೆ 6ಕ್ಕೆ ದೆಹಲಿಯ ಖೇಲ್ ತಮಾಶಾ ತಂಡದಿಂದ ‘ಧಿನ್ ಚೆಕ್ ಪೋಮ್ ಪೋಮ್ ಪೋಶ್’ ಮಕ್ಕಳ ನಾಟಕ ಪ್ರದರ್ಶನವಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 98456 05012 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.