ADVERTISEMENT

ಮೈಸೂರು ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಕ್ರಮ: ಸಚಿವ ಎಸ್‌ಟಿಎಸ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 8:50 IST
Last Updated 22 ಅಕ್ಟೋಬರ್ 2022, 8:50 IST
ಸಚಿವ ಎಸ್‌ಟಿಎಸ್
ಸಚಿವ ಎಸ್‌ಟಿಎಸ್   

ಮೈಸೂರು: ‘ನಗರದಲ್ಲಿರುವ ‍ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಭರವಸೆ ನೀಡಿದರು.

ಮಹಾರಾಣಿ ಕಾಲೇಜಿನಲ್ಲಿ ಶಿಥಿಲಗೊಂಡಿದ್ದ ಪಾರಂಪರಿಕ ಕಟ್ಟಡ ಮಳೆಯಿಂದಾಗಿ ಕುಸಿದ ಬಗ್ಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಈ ವರ್ಷ ನಿರೀಕ್ಷೆಗೂ ಮೀರಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಹಲವು ಕಡೆ ಹಾನಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ಸಮಸ್ಯೆಯಾಗಿದೆ ಎಂಬುದರ ಮಾಹಿತಿ ಪಡೆದು ಪರಿಹರಿಸಲಾಗುವುದು. ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದರು.

‘ದಸರಾ ಮಹೋತ್ಸವದ ಖರ್ಚು–ವೆಚ್ಚಗಳನ್ನು ಲೆಕ್ಕವನ್ನು ಶೀಘ್ರದಲ್ಲೇ ಕೊಡುತ್ತೇನೆ. 19 ಉಪ‌ ಸಮಿತಿಯವರು ಲೆಕ್ಕ ಕೊಟ್ಟಿದ್ದಾರೆ. ಇನ್ನೆರಡು ಉಪ ಸಮಿತಿಯವರು ಕೊಡಬೇಕಿದೆ. ಎಲ್ಲ ಮಾಹಿತಿಯೂ ಲಭ್ಯವಾಗುತ್ತಿದ್ದಂತೆಯೇ ಮಾಧ್ಯಮದ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.