
ಪ್ರಜಾವಾಣಿ ವಿಶೇಷಕರ್ನಾಟಕದ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶನಿವಾರ ಅದ್ದೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಿಗ್ಗೆ 11ಕ್ಕೆ ಸುತ್ತೂರು ವೀರಸಿಂಹಾಸನ ಮಠದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ಭಕ್ತರು 'ಹರಹರ ಮಹದೇವ', 'ಜೈ ಶಿವರಾತ್ರೀಶ್ವರ' ಎಂದು ಘೋಷಣೆ ಕೂಗುತ್ತ ರಥದ ಮಿಣಿ ಎಳೆದರು. ಕೆಲವರು ದೂರದಿಂದಲೇ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.