ADVERTISEMENT

ತಿ.ನರಸೀಪುರ ಪುರಸಭೆ: ನಾಮನಿರ್ದೇಶಿತ ಸದಸ್ಯರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:47 IST
Last Updated 20 ಜೂನ್ 2025, 14:47 IST
ತಿ.ನರಸೀಪುರ ಪುರಸಭಾ ಕಚೇರಿಯ ಸಭಾಂಗಣದಲ್ಲಿ ನಾಮನಿರ್ದೇಶಿತರಾದ ಸಬೀಲ್, ನಾಗರಾಜು ಅವರನ್ನು ಅಭಿನಂದಿಸಲಾಯಿತು
ತಿ.ನರಸೀಪುರ ಪುರಸಭಾ ಕಚೇರಿಯ ಸಭಾಂಗಣದಲ್ಲಿ ನಾಮನಿರ್ದೇಶಿತರಾದ ಸಬೀಲ್, ನಾಗರಾಜು ಅವರನ್ನು ಅಭಿನಂದಿಸಲಾಯಿತು   

ತಿ.ನರಸೀಪುರ: ಪಟ್ಟಣದ ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ರಹಮತ್ ಉಲ್ಲಾ ಖಾನ್ (ಸಬೀಲ್) ಹಾಗೂ ಎಂ. ನಾಗರಾಜು ಅವರನ್ನು ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ಸ್ವಾಗತಿಸಿ ಅಭಿನಂದಿಸಲಾಯಿತು‌.

ಸದಸ್ಯ ಸೈಯದ್ ಅಹಮ್ಮದ್‌ ಮಾತನಾಡಿ, ‘ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಇಬ್ಬರಿಗೆ ಪುರಸಭೆಯಲ್ಲಿ ನಾಮ‌ನಿರ್ದೇಶನ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಅವರು ಸಾಮಾಜಿಕ ನ್ಯಾಯ ನೀಡಿದ್ದಾರೆ’ ಎಂದರು. 

ತಿ.ನರಸೀಪುರ ಕ್ಷೇತ್ರ ವ್ಯಾಪ್ತಿಯಿಂದ ನಾಮನಿರ್ದೇಶನಗೊಂಡ ಇಬ್ಬರು‌ ಸದಸ್ಯರನ್ನು ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಉಪಾಧ್ಯಕ್ಷೆ ಎಂ.ರಾಜೇಶ್ವರಿ ರಾಘವೇಂದ್ರ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೈಯದ್ ಅಹಮ್ಮದ್ ಸನ್ಮಾನಿಸಿದರು.

ADVERTISEMENT

ಮುಖಂಡರಾದ ರಾಘವೇಂದ್ರ, ಸುನೀಲ್ ಬೋಸ್ ಯುವ ಬ್ರಿಗೇಡ್ ಅಧ್ಯಕ್ಷ ಕುಮಾರ್ ರಾಮೇಗೌಡ, ಕೆಪಿಸಿಸಿ ಸದಸ್ಯ ಸುಂದರ ನಾಯಕ, ಮುಖಂಡರಾದ ಮುದ್ದಬೀರನಹುಂಡಿ ಶ್ರೀಕಂಠ, ಮನ್ನೆಹುಂಡಿ ಪರಶಿವ, ಸಿದ್ದರಾಜು, ಶೇಖರ್, ಗುರು ಮಲ್ಲು, ಕೃಷ್ಣ, ಆನಂದ್, ಅಣ್ಣಪ್ಪ, ರವಿ, ಕಾಂತರಾಜು, ನಾಗರತ್ನಮ್ಮ, ಸಿದ್ದರಾಜು, ಬಸವಣ್ಣ, ಮಾಯ, ಸ್ವಾಮಿ, ಮಹೇಶ್, ಲಕ್ಷ್ಮಣ್ ಕುಮಾರ್, ಪ್ರಶಾಂತ್ ಈಡಿಗರ್, ಅನ್ವರ್ ಪಾಷ, ನೂರಿ ಪಾಷ, ಅಮ್ಜದ್ ಪಾಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.