ತಿ. ನರಸೀಪುರ : ತಾಲ್ಲೂಕಿನ ಕೋಣಗಳ್ಳಿಯಲ್ಲಿ ಭಾನುವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಬೋನು ಇರಿಸಲಾಗಿದೆ.
ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎಂ. ಅಶ್ವಿನ್ ಕುಮಾರ್, ಮನೆಗಳ ಆಸು ಪಾಸು ಬೆಳೆದಿರುವ ಗಿಡಗಂಟಿಗಳು, ಗ್ರಾಮದ ರಸ್ತೆಯ ಸುತ್ತಲೂ ಇರುವ ಪೊದೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು ಜನರು ಭಯಭೀತರಾಗಿದ್ದಾರೆ. ಜನರು ಜಮೀನುಗಳಿಗೆ, ದನಕರುಗಳನ್ನು ಮೇಯಿಸಲು ಹೋಗಲು ಭಯ ಪಡುವ ಅತಂಕವಿದೆ. ಆದಷ್ಟು ಬೇಗ ಚಿರತೆ ಹಿಡಿದು ಆತಂಕ ದೂರ ಮಾಡುವಂತೆ ಮನವಿ ಮಾಡಿರುವುದಾಗಿ ಗ್ರಾಮಸ್ಥ ಸಿದ್ದರಾಜು ತಿಳಿಸಿದರು.
ನಾಯಿಗಳನ್ನು ಓಡಿಸಲುಗ್ರಾಮದ ಮಹಿಳೆಯೊಬ್ಬರು ಮನೆಯಿಂದ ಹೊರಬಂದ ವೇಳೆ ಚಿರತೆ ಇರುವುದನ್ನು ಕಂಡು ಗಾಬರಿಯಿಂದ ಓಡಿ ಹೋಗಿದ್ದರು. ಅದೇ ವೇಳೆ ಮನೆಯ ಹೊರಗಿದ್ದ ಬಾಲಕ ಚಿರತೆ ಕಂಡು ಮನೆಯೊಳಗೆ ಓಡಿ ಹೋಗಿದ್ದ. ಕೂಗಿ ಕೊಂಡ ವೇಳೆ ಚಿರತೆ ಪರಾರಿಯಾಗಿತ್ತು ಎಂಬ ಮಾಹಿತಿ ಮೇರೆಗೆ ಸೆರೆ ಕಾರ್ಯಾಚರಣೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.