ತಿ.ನರಸೀಪುರ: ಸಮುದಾಯದ ಸಾಮಾನ್ಯ ವ್ಯಕ್ತಿಗೂ ಸಹಾಯ ದೊರಕಿಸುವ ಉದ್ದೇಶದೊಂದಿಗೆ ಸ್ಥಾಪಿತವಾದ ಬಸವೇಶ್ವರ ಸಹಕಾರ ಸಂಘವು ಕಾರ್ಯ ಚಟುವಟಿಕೆ ವಿಸ್ತರಿಸಿ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಈಚೆಗೆ ನಡೆದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಪ್ರಥಮ ವರ್ಷದ ಮಹಾಸಭೆ, ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಪ್ರಸಕ್ತ ಸನ್ನಿವೇಶದಲ್ಲಿ ವೀರಶೈವ ಸಮುದಾಯದೊಳಗಿನ ವಿಭಿನ್ನ ಅಭಿಪ್ರಾಯಗಳು, ಅಸಹನೆ, ದ್ವೇಷ ಮನೋಭಾವದಿಂದಾಗಿ ಸಮುದಾಯದ ಸಂಘಟನೆ ಕ್ಷೀಣವಾಗುತ್ತದೆ. ಹಿಂದೆ ಸಮುದಾಯದವರಿಗೆ ಜಮೀನ್ದಾರಿಕೆ ಇತ್ತು. ಇಂದು ಅದು ಕಡಿಮೆಯಾಗುತ್ತಿದೆ. ವೀರಶೈವ ಸಮಾಜವು ಈ ಭಾಗದಲ್ಲಿ 12 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ, ನಾವು ಮತ್ತೆ ರಾಜಕೀಯವಾಗಿ ಸದೃಢರಾಗಬೇಕು. ಚುನಾವಣೆಯಲ್ಲಿ ವೀರಶೈವ ಸಮಾಜದ ಪ್ರತಿನಿಧಿಗಳಿಗೆ ಅವಕಾಶ ದೊರಕಿಸುವತ್ತ ಹರಿಸಬೇಕಿದೆ. ಒಗ್ಗಟ್ಟಿನಿಂದ ಸಮಾಜ ಕಟ್ಟು ವಂತೆ ಸಲಹೆ ಮಾಡಿದರು.
ಮುಡುಕನಪುರ ಹಲವಾರ ಮಠದ ಷಡಕ್ಷರ ದೇಶೀಕೇಂದ್ರಸ್ವಾಮೀಜಿ, ಚಿದರವಳ್ಳಿ ಪಾರಮಾರ್ಥಿಕ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ವಾಟಾಳು ಮಠದ ಕಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ,ಸಹಕಾರಿ ಸಂಘದ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ,ಅಭಿವೃದ್ಧಿ ಅಧಿಕಾರಿ ಆರ್.ಎಸ್.ಸುರೇಶ್, ಬಸವೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಎಸ್ ಬಿ.ಸುಗಂಧರಾಜು ಉಪಾಧ್ಯಕ್ಷ ಎಂ.ಸಿದ್ದಲಿಂಗಸ್ವಾಮಿ, ಸದಸ್ಯರಾದ ಪಿ.ಕುಮಾರ್,ಸೀಹಳ್ಳಿ ಗುರುಮೂರ್ತಿ,ಮಂಟೇಲಿಂಗಪ್ಪ,ಬಿ.ಜಿ.ರಾಜಶೇಖರ, ಸವಿತಾ ಪ್ರಕಾಶ್, ಎಂ.ಎಸ್.ಸುಧಾಕರ್, ಪರಮೇಶ ಪಟೇಲ್, ತುರುಗನೂರು ರಾಜಣ್ಣ, ಡಣಾಯಕನಪುರ ಮಲ್ಲಣ್ಣ,ಅಂಗಡಿ ನಾಗೇಶ್ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಸ್ ಎಂ ಆರ್ ಪ್ರಕಾಶ್ ಮುಖಂಡರಾದ ಕಾವೇರಿ ಪುರ ಮಲ್ಲಣ್ಣ, ವಕೀಲ ಜ್ಞಾನೇಂದ್ರ ಮೂರ್ತಿ, ಮೂಗೂರು ಕುಮಾರಸ್ವಾಮಿ, ಶಾಂತರಾಜು, ಹೆಳವರಹುಂಡಿ ನಟರಾಜು, ತೊಂಟೇಶ್, ಕೈಯಂಬಳ್ಳಿ ಅಶೋಕ್ , ಹೋಟೆಲ್ ರಾಜಣ್ಣ, ಸತ್ಯಪ್ಪ, ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಷಡಕ್ಷರಿ, ಸಂಘದ ಸಿಇಒ ಬಿ.ಎಸ್.ಉಮಾ ,ಸಂಘದ ಷೇರುದಾರರು, ಮುಖಂಡರು ಭಾಗವಹಿಸಿದ್ದರು.
ವಾಟಾಳು ಮಠಾಧೀಶ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಅನುಭವವಿರುವ ಈ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಸಹಕಾರ ಸಂಘವನ್ನು ಹೊಂದಾಣಿಕೆಯಿಂದ ಮುನ್ನಡೆಸಿ ಮಾದರಿ ಸಂಘವಾಗಿ ಬೆಳಸಬೇಕು. ಹಣ ನಿಂತ ನೀರಾಗದೇ ಸದಾ ಚಲನೆಯಲ್ಲಿದ್ದು ಇತರರಿಗೆ ಸಹಕಾರಿಯಾಗಬೇಕು. ನಾನು ಮುಡುಕನಪುರ ಹಾಗೂ ಚಿದರವಳ್ಳಿ ಗವಿಮಠದ ಶ್ರೀಗಳು ಸೇರಿ ಸಂಘಕ್ಕೆ₹3 ಲಕ್ಷ ನೀಡುತ್ತೇವೆ. ಜೊತೆಗೆ ಸಂಘಕ್ಕೆ ಸದಸ್ಯರ ನೋಂದಣಿಗೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.