ADVERTISEMENT

ತಿ.ನರಸೀಪುರ: ವ್ಯಸನಮುಕ್ತ ಸಮಾಜಕ್ಕೆ ರಾಜ ಯೋಗ ಅಗತ್ಯ–ಡಾ.ದಯಾನಂದ ಬಾಬು

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 3:15 IST
Last Updated 28 ಜನವರಿ 2026, 3:15 IST
ತಿ.ನರಸೀಪುರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾನಿಲಯದ ಶಿವ ದರ್ಶನ ಭವನದಲ್ಲಿ ನಡೆದ ವ್ಯಸನಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ದಯಾನಂದ ಬಾಬು ಉದ್ಘಾಟಿಸಿದರು
ತಿ.ನರಸೀಪುರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾನಿಲಯದ ಶಿವ ದರ್ಶನ ಭವನದಲ್ಲಿ ನಡೆದ ವ್ಯಸನಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ದಯಾನಂದ ಬಾಬು ಉದ್ಘಾಟಿಸಿದರು   

ತಿ.ನರಸೀಪುರ: ‘ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ರಾಜ ಯೋಗ ಶಿಕ್ಷಣ ಅಗತ್ಯ’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ಡಾ.ದಯಾನಂದ ಬಾಬು ಹೇಳಿದರು.

ಪಟ್ಟಣದ ವಿದ್ಯಾನಗರದಲ್ಲಿರುವ ಅಂತರರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವ ಜ್ಞಾನ ದರ್ಶನ ಭವನದಲ್ಲಿ ಮಂಗಳವಾರ ‘ವ್ಯಸನಮುಕ್ತ ಸಮಾಜ ನಿರ್ಮಾಣ’ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಸಂಘ, ಸಂಸ್ಥೆಗಳು ಅನೇಕ ಜಾಗೃತಿ ಕಾರ್ಯಕ್ರಮಗಳ ಮೂಲಕ‌ ವ್ಯಸನಮುಕ್ತ ದೇಶ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಆದರೆ, ರಾಜ ಯೋಗ ಶಿಕ್ಷಣ ಪಡೆದಲ್ಲಿ ಮನಸ್ಸಿನ ಪ್ರಶಾಂತತೆ ಹೆಚ್ಚಿ ಯಾವುದೇ ಸಮಸ್ಯೆಗೆ ಒಳಗಾಗದೇ ಆಧ್ಯಾತ್ಮಿಕ ಭಾವನೆಗಳು ಮೂಡುತ್ತವೆ. ಇವು‌ ನಮ್ಮನ್ನು‌ ವ್ಯಸನದಿಂದ ದೂರವಿರಿಸುತ್ತದೆ’ ಎಂದರು.

ADVERTISEMENT

ಮನೋವೈದ್ಯ ಡಾ.ಕಿಶೋರ್ ಎಂ.ಆರ್. ಮಾತನಾಡಿ, ‘ವ್ಯಸನಗಳಿಗೆ ಮೂಲ ಕಾರಣ ಮಾನಸಿಕ ಒತ್ತಡ. ಮಾನಸಿಕ ಒತ್ತಡದಿಂದ ಮುಕ್ತರಾಗಲು ಧ್ಯಾನ ಬಹಳ ಅವಶ್ಯಕ’ ಎಂದರು.

ಗುಂಡ್ಲುಪೇಟೆ ಸೇವಾ ಕೇಂದ್ರದ ರಾಜಯೋಗ ಪ್ರವಾಚಕಿ ವೀಣಾಜೀ ಮಾತನಾಡಿ, ‘ವರ್ತಮಾನ ಸಮಯದಲ್ಲಿ ನಮಗೆ ಬರುವ ಕಾಯಿಲೆಗಳಲ್ಲಿ ಶೇ 75ರಷ್ಟು ಮನೋದೈಹಿಕ ಕಾರಣಗಳಿಂದ ಬರುವಂತಹದ್ದು ಎಂದು ವೈದ್ಯರು ಮತ್ತು ಮನೋಚಿಕಿತ್ಸಕರು ಅಭಿಪ್ರಾಯಪಟ್ಟಿದ್ದಾರೆ’ ಎಂದರು.

ಮನೋಬಲ ತರಬೇತುದಾರರಾದ ಧಾನೇಶ್ವರೀಜೀ ಮಾತನಾಡಿ, ‘ವಿದ್ಯಾರ್ಥಿಗಳು ಸಹವಾಸ ದೋಷದಿಂದ ವ್ಯಸನಗಳಿಗೆ ಬಲಿಯಾಗುತ್ತಿರುವುದು ಶೋಚನೀಯ. ಯುವಕರು ಸಹ ಮಾದಕ ವಸ್ತುಗಳ ಸೇವನೆಯಿಂದ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಮಿದುಳು ಹಾನಿಯಾಗುವ ಸಾಧ್ಯತೆ ಇದೆ. ಮದ್ಯ ವ್ಯಸನದಿಂದ ಉತ್ತಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕುಟುಂಬದಲ್ಲಿ ನಿರಾಶೆ, ಭಯ, ಖಿನ್ನತೆ, ದುಃಖ ಕಾಣತೊಡಗಿದೆ. ನೆಮ್ಮದಿ ಮಾಯವಾಗುತ್ತದೆ, ಮಾನವೀಯ ಸಂಭಂದಗಳನ್ನು ಕದಡುತ್ತಿವೆ’ ಎಂದರು.

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್‌ನ ಆರಾಧ್ಯ, ಸ್ವಾಮಿ, ಮಹೇಶ, ನಾಗಣ್ಣ, ಮಹಾಲಕ್ಷ್ಮಿ, ಪುಟ್ಟೇಗೌಡ, ನಂಜಪ್ಪ ಜಾನಕಮ್ಮ, ಸುಬ್ಬಲಕ್ಷ್ಮಿ ಪದ್ಮ, ನರಾಯಣ, ನಾಗಮಣಿ, ಸಂಜೀವ್, ಸಿದ್ದೇಗೌಡ, ಶಾಂಭವಿ, ಶಿವಮ್ಮ ಹಾಜರಿದ್ದರು.

ತಿ.ನರಸೀಪುರ ಪಟ್ಟಣದ ಪ್ರಜಾಪಿತ ಬ್ರಹ್ನಕುಮಾರಿ ಈಶ್ವರೀಯ ವಿದ್ಯಾನಿಲಯದ ಶಿವ ದರ್ಶನ ಭವನದಲ್ಲಿ ನಡೆದ ವ್ಯಸನ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮ ವನ್ನು ವೈದ್ಯಾಧಿಕಾರಿ ಡಾ. ದಯಾನಂದ ಬಾಬು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.