ತಿ.ನರಸೀಪುರ: ಇಲ್ಲಿನ ಪುರಸಭೆಯಲ್ಲಿ ನಡೆದಿರುವ ಸಾರ್ವಜನಿಕ ತೆರಿಗೆ ವಂಚನೆ ಪ್ರಕರಣ ಮತ್ತು ಭ್ರಷ್ಟಾಚಾರವನ್ನು ಸಿಐಡಿ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಮಿತಿಯ ರಾಜ್ಯ ಸಂಚಾಲಕ ಆಲಗೂಡು ಎಸ್ ಚಂದ್ರಶೇಖರ್ ಮಾತನಾಡಿ, ‘ಪಟ್ಟಣದ ಪುರಸಭೆಯಲ್ಲಿ ಬ್ಯಾಂಕ್ ಚಲನ್‌ನಲ್ಲಿ ನಕಲಿ ಮೊಹರು ಬಳಸಿ ತೆರಿಗೆ ವಂಚಿಸಿರುವ ಪ್ರಕರಣದ ಬಗ್ಗೆ ಪೊಲೀಸರು ದೂರು ನೀಡಿದ್ದರೂ ಪ್ರಕರಣದ ಬಗ್ಗೆ ಮುಖ್ಯಾಧಿಕಾರಿಗಳ ಹಾಗೂ ಕಚೇರಿ ಸಿಬ್ಬಂದಿ ವೈಫಲ್ಯ ಕಾಣುತ್ತಿದೆ. ಸದಸ್ಯ ಟಿ. ಎಂ. ನಂಜುಂಡಸ್ವಾಮಿ ಅವರು ಜನ ಪ್ರತಿನಿಧಿಯಾಗಿ ನಂಬಿ ಬಂದ ತೆರಿಗೆದಾರರನ್ನು ವಂಚಿಸಿದ್ದಾರೆ. ಅಂದಾಜು ₹40 ಕೋಟಿಯಷ್ಟು ವಂಚನೆಯಾಗಿದೆ ಎಂದು ಮುಖ್ಯಾಧಿಕಾರಿ ಹೇಳಿರುವ ಆಡಿಯೊ ಇದೆ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯ ವಿದೆ’ ಎಂದರು.
‘ಇ – ಆಸ್ತಿ ಮಾಡುವ ವೇಳೆ ಕಚೇರಿಯ ವಿವಿಧ ಹಂತದ ಅಧಿಕಾರಿಗಳು ಕ್ರಮವಾಗಿ ಪರಿಶೀಲಿಸಬೇಕಿತ್ತು. ಅಧೀನ ಅಧಿಕಾರಿಗಳ ಬಗ್ಗೆ ಕ್ರಮವೂ ಅಗಬೇಕು. ಅವರ ರಕ್ಷಣೆಗೆ ಮುಖ್ಯಾಧಿಕಾರಿಗಳು ನಿಂತಂತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಗೆ ವಹಿಸಬೇಕು’ ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಕಳ್ಳೀಪುರ ಮಹದೇವಸ್ವಾಮಿ ಮಾತನಾಡಿ, ‘ಪ್ರಕರಣದ ಬಗ್ಗೆ ಎಸ್ಐಟಿ ತಂಡದ ಮಾದರಿಯಲ್ಲಿ ತನಿಖೆ ಮಾಡಿಸಬೇಕು ಎಂದರು.
ಆಲಗೂಡು ಮಹದೇವ್ ಮಾತನಾಡಿ, ‘ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ’ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಕೆಂಪಯ್ಯನಹುಂಡಿ ರಾಜು, ಕನ್ನಾಯಕನಹಳ್ಳಿ ಮರಿಸ್ವಾಮಿ, ಕೊಳತೂರು ಪ್ರಭಾಕರ್, ತಾಲ್ಲೂಕು ಸಂಚಾಲಕ ನೆರಗತನಳ್ಳಿ ಮನೋಜ್ ಕುಮಾರ್, ಸೋಮನಾಥಪುರ ಗೋವಿಂದರಾಜು, ತೊಟ್ಟವಾಡಿ ರಾಚಪ್ಪ, ನಿಲಸೊಗೆ ಕುಮಾರ್ ಶಿವಕುಮಾರ್, ಕುಪ್ಯ ಗವಿಸಿದ್ದಯ್ಯ, ಚೌಹಳ್ಳಿ ಪರಶುರಾಮ್, ಕಣ್ಣಲ್ಲಿ ಶಿವಕುಮಾರ್ ಜಯಣ್ಣ ಮಹೇಶ್ ಸ್ವಾಮಿ ಎಂ ಕೆ ಮಲ್ಲೇಶ್, ಕೃಷ್ಣ, ರವಿಕಾಂತ್, ಶಿವು, ಅರ್ಜುನ್, ಚಿನ್ನಸ್ವಾಮಿ , ಮಹಾದೇವಸ್ವಾಮಿ, ರೈತ ಮುಖಂಡರಾದ ರಾಮಕೃಷ್ಣ ಚೆಲುವರಾಜು, ಅತ್ತಳ್ಳಿ ಶಿವನಂಜು, ರಾಜು ಶಾಂತನಾಗರಾಜು, ಶಂಕರೇಗೌಡ, ಸೋಮಣ್ಣ ಜಗದೀಶ್, ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.