ADVERTISEMENT

ಮೈಸೂರು | ಜುಲೈ 18ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 13:41 IST
Last Updated 15 ಜುಲೈ 2023, 13:41 IST

ಮೈಸೂರು: ಮೈಸೂರು ವಿಭಾಗದೊಳಗಿನ ಸರ್ಕಾರಿ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರ ಕೋರಿಕೆ ಹಾಗೂ ಪರಸ್ಪರ ವರ್ಗಾವಣೆಗೆ ಆನ್‌ಲೈನ್‌ ಕೌನ್ಸೆಲಿಂಗ್‌ ಪ್ರಕ್ರಿಯೆಯನ್ನು ಇಲ್ಲಿನ ಶಾಲಾ ಶಿಕ್ಷಣ ಇಲಾಖೆಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವಿಭಾಗೀಯ ಕಾರ್ಯದರ್ಶಿ ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಜುಲೈ 18ರಿಂದ ನಡೆಸಲಾಗುವುದು.

ಆದ್ಯತೆ ಕ್ರಮಸಂಖ್ಯೆ ಆಧರಿಸಿ ನಿಗದಿಪಡಿಸಿದ ದಿನಾಂಕದಂದು ಬೆಳಿಗ್ಗೆ 9.30ಕ್ಕೆ ಹಾಜರಾಗಬೇಕು. ಜುಲೈ 18ರಂದು ಪ್ರಾಥಮಿಕ ಶಾಲಾ ವಿಭಾಗದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಮತ್ತು ಜುಲೈ 19ರಂದು ಪ್ರಾಥಮಿಕ ಶಾಲಾ ವಿಭಾಗದ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಇರಲಿದೆ.

ಪ್ರೌಢಶಾಲಾ ವಿಭಾಗ

ADVERTISEMENT

ಜುಲೈ 21ರಂದು ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ, ಜುಲೈ 22 ಮತ್ತು 24ರಂದು ಸಹ ಶಿಕ್ಷಕರಿಗೆ, ಪರಸ್ಪರ ವರ್ಗಾವಣೆಗೆ ಜುಲೈ 25ರಂದು ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಕೌನ್ಸೆಲಿಂಗ್ ನಡೆಯಲಿದೆ.

ಮೂಲ ವರ್ಗಾವಣೆ ಅರ್ಜಿ, ದೃಢೀಕೃತ ಭಾವಚಿತ್ರ ಸಹಿತವಿರುವ ಮೂಲ ಸೇವಾ ದೃಢೀಕರಣ ಪತ್ರ, ಅರ್ಜಿಯಲ್ಲಿ ಕೋರಿರುವ ಆದ್ಯತೆಗೆ ಸಂಬಂಧಿಸಿದ ಪೂರಕ ಮೂಲ ದಾಖಲಾತಿಗಳನ್ನು ತರಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.