
ಮೈಸೂರು: ‘ಪ್ರಸ್ತುತ ಸಾಲು ಸಾಲು ಸಮಸ್ಯೆಗಳು, ಸರ್ವತ್ರ ಸಮರ ಸಂಗ್ರಾಮ ಕಂಡುಬರುತ್ತಿದೆ’ ಎಂದು ಸಾಹಿತಿ ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಕಳವಳ ವ್ಯಕ್ತಪಡಿಸಿದರು.
ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಮತ್ತು ಕರ್ನಾಟಕ ಸಾಂಸ್ಕೃತಿಕ ಸಂಭ್ರಮ ಕುರಿತ ವಿಚಾರಸಂಕಿರಣ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಈಗ ಸಮಷ್ಟಿಯ ಬದುಕು ಸಮಸ್ಯಾತ್ಮಕವಾಗಿದ್ದು, ಇದು ಹೋಗಿ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣವಾಗಬೇಕು’ ಎಂದು ಆಶಿಸಿದರು.
‘ನಾವು ಸುಗ್ಗಿಯ ಸಂಭ್ರಮದಲ್ಲಿದ್ದೇವೆ, ಬಹುತ್ವದ ಸಂತಸದಲ್ಲಿದ್ದೇವೆ. ಸಂಭ್ರಮ ಎಂಬುದು ಭ್ರಮೆ ಆಗಬಾರದು. ಸಂಕ್ರಾಂತಿ ಇಂಗ್ಲಿಷ್‌ನಲ್ಲಿ ಸಮ್ ಕ್ರಾಂತಿ ಆಗುತ್ತದೆ. ಯಾವ ಕ್ರಾಂತಿಯೂ ಬೇಡ. ಕತ್ತಲೆ ಕಳೆದು ಶಾಂತಿಯ ಬೆಳಕು ಮೂಡಲಿ. ಸುಗ್ಗಿ ಎಂದರೆ ಬಿತ್ತಿ ಬೆಳೆಯುವಂಥದ್ದು. ಈಗ ವಿಷೋದ್ಯಾನವಾಗಿದೆ. ಇದು ಅಮೃತೋದ್ಯಾನ ಆಗಬೇಕು. ಉತ್ಸಾಹ- ಉಲ್ಲಾಸ ಕೂಡಿರಲಿ’ ಎಂದರು.
ಸಿ.ಎಸ್. ರಾಜಶೇಖರ್, ಯು.ಎಂ. ವನಿತಾ, ಸಿ. ವೆಂಕಟೇಶ, ಸತ್ಯ ಆರ್. ಕೆಸ್ತೂರು, ಕೇಶವಮೂರ್ತಿ, ರೇಖಾ ಕೃಷ್ಣಮೂರ್ತಿ, ಸಿ.ಎನ್. ಶ್ವೇತಾ, ವರ್ಷಾ ಹಾಸನ, ಎಚ್. ಗಾಯತ್ರಿ ಭಟ್, ಬಾಬುರಾವ್, ಬುಷ್ರಾ ಬಾನು, ಎಂ.ಪಿ. ರಂಗಸ್ವಾಮಿ, ವಿ. ಶಶಿಕಲಾ, ಟಿ.ಎಸ್. ರೋಹಿಣಿ, ಆರ್. ಕಾಂತರಾಜು, ಟಿ.ಜಿ. ರಾಮೇಗೌಡ, ಕೆ.ಎನ್. ಚಿದಾನಂದ್, ಕೆ. ವೈಭವಿ, ಮುಬಾರಕ್ ರಶೀದ ಸರಕಾವಸ, ಉದಯ ಆರ್. ರಘುವೀರಮಠ, ಡಿ.ಪಿ. ಚಿಕ್ಕಣ್ಣ, ಟಿ. ,ಸೌಮ್ಯಲತಾ, ಬಿ.ಎಸ್. ಸತೀಶ್, ಪ್ರದೀಪ್ ಕೃಷ್ಣೇಗೌಡ, ಆಂಜನೇಯ ಹೊಳೆಯಪ್ಪ ಕಳಕವರ, ಕಿಶೋರ್ ರಮೇಶ ರಜಪೂತ, ಎಂ,ಎನ್. ಸತ್ಯನಾರಾಯಣ, ಸಂಪ್ರೀತಾ ನಾಗಭೂಷಣ, ಗೌತಮಿ ವಿ. ಸುತಾರ್, ಶಾಂಭವ ಗಣೇಶಗುಡಿ, ಸರಸ್ವತಿ ಚಂದ್ರಶೇಖರರಾವ್, ವೈ. ಶಶಿಕಲಾ, ಜಿ.ಆರ್. ರಾಜೇಶ್ ನಾಯಕ್, ಎಂ. ಮೋನಿಷಾ, ಅವರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರದಾನ ಮಾಡಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ‘ನಮ್ಮ ಆಯುರ್ವೇದ ಕರ್ನಾಟಕ’ ಸಂಸ್ಥೆಯ ನಿರ್ದೇಶಕ ವೈ.ಆರ್. ಮಹೇಶ್, ದಕ್ಷ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯಚಂದ್ರ ರಾಜು, ರಕ್ತದಾನಿ ಟಿ. ತ್ಯಾಗರಾಜು, ಸಾಹಿತಿ ಎಸ್. ಅಕ್ಬರ್ ಭಾಷಾ, ಪ್ರತಿಷ್ಠಾನದ ಅಧ್ಯಕ್ಷ ಗುಣವಂತ ಮಂಜು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.