ಮುದ್ದೇಗೌಡ, ಬಸವೇಗೌಡ ಮತ್ತು ವಿನೋದ್
ನಂಜನಗೂಡು (ಮೈಸೂರು ಜಿಲ್ಲೆ): ನಂಜನಗೂಡು ತಾಲ್ಲೂಕಿನ ಕಾಮನಹಳ್ಳಿಯಲ್ಲಿ ಹಸು ತೊಳೆಯಲು ಕೆರೆಗೆ ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಿನೋದ್ (17) ಬಸವೇಗೌಡ (45) ಮತ್ತು ಮುದ್ದೇಗೌಡ (48) ಮೃತಪಟ್ಟವರು.
'ಯುಗಾದಿ ಹಬ್ಬಕ್ಕಾಗಿ ಹಸುವನ್ನು ಸ್ನಾನ ಮಾಡಿಸಲು ಶನಿವಾರ ಬೆಳಿಗ್ಗೆ ಮೂವರು ಕೆರೆಗೆ ತೆರಳಿದ್ದರು. ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.